ADVERTISEMENT

ಸೇನ್‌, ಪ್ರಣಯ್‌ ಮೇಲೆ ನಿರೀಕ್ಷೆ: ಜಪಾನ್‌ ಬ್ಯಾಡ್ಮಿಂಟನ್‌ ಟೂರ್ನಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 23:30 IST
Last Updated 10 ನವೆಂಬರ್ 2025, 23:30 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌   

ಕುಮಾಮೊಟೊ, ಜಪಾನ್‌: ಅನುಭವಿ ಆಟಗಾರರಾದ ಎಚ್‌.ಎಸ್‌. ಪ್ರಣಯ್‌ ಮತ್ತು ಲಕ್ಷ್ಯ ಸೇನ್‌ ಅವರು ಮಂಗಳವಾರ ಆರಂಭವಾಗುವ ಮಾಸ್ಟರ್‌ ಜಪಾನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸುಧಾರಿತ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ. 

₹4.21 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿರುವ ಟೂರ್ನಿಯಲ್ಲಿ 24 ವರ್ಷದ ಸೇನ್ ಏಳನೇ ಶ್ರೇಯಾಂಕದ ಪಡೆದಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಸೇನ್‌ ಇಲ್ಲಿ ವಿಶ್ವದ 25ನೇ ಕ್ರಮಾಂಕದ ಕೋಕಿ ವಟನಾಬೆ (ಜಪಾನ್‌) ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

2023ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಪ್ರಣಯ್ ಅವರು ಮೊದಲ ಸುತ್ತಿನಲ್ಲಿ ಮಲೇಷ್ಯಾದ ಜುನ್ ಹಾವೊ ಲಿಯೊಂಗ್ ಅವರನ್ನು ಎದುರಿಸಲಿದ್ದಾರೆ. 

ADVERTISEMENT

ಹೈಲೊ ಓಪನ್ ಕ್ವಾರ್ಟರ್ ಫೈನಲ್‌ಗೆ ತಲುಪುವ ಹಾದಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಸಿಂಗಪುರದ ಲೋಹ್ ಕೀನ್ ಯೂ ಅವರಿಗೆ ಆಘಾತ ನೀಡಿದ್ದ ಕರ್ನಾಟಕದ ಆಯುಷ್ ಶೆಟ್ಟಿ ಅವರಿಗೆ ಕಠಿಣ ಸವಾಲು ಎದುರಾಗಿದೆ. ಅವರು ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತ ಕುನ್ಲಾವುಟ್‌ ವಿಟಿಡ್ಸರ್ನ್‌ (ಥಾಯ್ಲೆಂಡ್‌) ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.