ADVERTISEMENT

ಚಿನ್ನ ಗೆದ್ದ ಜಿಲ್ಲಿ ಡಲಾಬೆಹರಾ

ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌

ಪಿಟಿಐ
Published 18 ಏಪ್ರಿಲ್ 2021, 11:37 IST
Last Updated 18 ಏಪ್ರಿಲ್ 2021, 11:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಾಷ್ಕೆಂಟ್‌: ಭಾರತದ ಜಿಲ್ಲಿ ಡಲಾಬೆಹರಾ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ 45 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತೆ ಜಿಲ್ಲಿ, ಭಾನುವಾರ ಸ್ನ್ಯಾಚ್‌ನಲ್ಲಿ 69 ಹಾಗೂ ಕ್ಲೀನ್ ಆ್ಯಂಡ್‌ ಜೆರ್ಕ್‌ನಲ್ಲಿ 88 ಕೆಜಿ ಸೇರಿ ಒಟ್ಟು 157 ಕೆಜಿ ಭಾರ ಎತ್ತಿದರು. ಇಬ್ಬರೇ ಸ್ಪರ್ಧಿಗಳು ಇದ್ದ ಕಣದಲ್ಲಿ ಪಿಲಿಪ್ಪೀನ್ಸ್‌ನ ಮೇರಿ ಫ್ಲೊರ್‌ ಡಿಯಾಜ್‌, ಒಟ್ಟು 135 ಕೆಜಿ (60 +75 ) ಭಾರ ಎತ್ತಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

45 ಕೆಜಿ ವಿಭಾಗವನ್ನು ಒಲಿಂಪಿಕ್ಸ್ ಅರ್ಹತೆಗೆ ಪರಿಗಣಿಸಲಾಗುವುದಿಲ್ಲ.

ADVERTISEMENT

2019ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲಿ ಬೆಳ್ಳಿಪದಕ ಗೆದ್ದುಕೊಂಡಿದ್ದರು. ಆ ಸಂದರ್ಭದಲ್ಲಿ ಅವರು 162 ಕೆಜಿ (71+91) ಭಾರ ಎತ್ತಿದ್ದರು. ಇಲ್ಲಿ ಆ ಸಾಧನೆಯನ್ನು ಉತ್ತಮಪಡಿಸಿಕೊಂಡರು.

ಮೀರಾಬಾಯಿ ಚಾನು (49 ಕೆಜಿ ವಿಭಾಗ) ಅವರು ಶನಿವಾರ ವಿಶ್ವದಾಖಲೆಯೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದರು. ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 119 ಕೆಜಿ ಎತ್ತಿ ಈ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.