ADVERTISEMENT

ಪ್ರೀ ಕ್ವಾರ್ಟರ್‌ಗೆ ಜೋಷ್ನಾ

ಸಿಐಬಿ ವಿಶ್ವ ಸ್ಕ್ವಾಷ್‌ ಚಾಂಪಿಯನ್‌ಷಿಪ್‌

ಪಿಟಿಐ
Published 29 ಅಕ್ಟೋಬರ್ 2019, 5:06 IST
Last Updated 29 ಅಕ್ಟೋಬರ್ 2019, 5:06 IST
ಜೋಷ್ನಾ ಚಿನ್ನಪ್ಪ
ಜೋಷ್ನಾ ಚಿನ್ನಪ್ಪ   

ಕೈರೊ, ಈಜಿಪ್ಟ್‌ : ಉತ್ತಮ ಆಟವಾಡಿದ ಭಾರತದ ಜೋಷ್ನಾ ಚಿನ್ನಪ್ಪ ಇಲ್ಲಿ ನಡೆಯುತ್ತಿರುವ ಸಿಐಬಿ ವಿಶ್ವ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಜೋಷ್ನಾ, ಎರಡನೇ ಸುತ್ತಿನ ಹಣಾಹಣಿಯಲ್ಲಿ ಹಾಂಗ್‌ಕಾಂಗ್‌ನ ಹೊ ಜೆ ಲೊಕ್‌ ಅವರನ್ನು ಎದುರಿಸಿದ್ದರು. ಜೋಷ್ನಾ 11–5, 11–4ರಿಂದ ಮುನ್ನಡೆಯಲ್ಲಿದ್ದ ವೇಳೆ ಗಾಯದ ಕಾರಣ ಹೊ ಜೆ ಪಂದ್ಯದಿಂದ ಹಿಂದೆ ಸರಿದರು. ಭಾರತದ ಆಟಗಾರ್ತಿಯನ್ನು ವಿಜೇತೆ ಎಂದು ಘೋಷಿಸಲಾಯಿತು.

16ರ ಘಟ್ಟದ ಪಂದ್ಯದಲ್ಲಿ ಅವರು ಎರಡನೇ ಶ್ರೇಯಾಂಕದ ಈಜಿಪ್ಟ್‌ನ ನೂರ್‌ ಎಲ್‌ ಶೆರ್ಬಿನಿ ಎದುರು ಆಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.