ADVERTISEMENT

ವೇಟ್‌ಲಿಫ್ಟಿಂಗ್‌: ಸಬರ್ ಜೋಷ್ಣಾಗೆ ಕಂಚು

ಪಿಟಿಐ
Published 29 ಜುಲೈ 2023, 2:14 IST
Last Updated 29 ಜುಲೈ 2023, 2:14 IST
ಪದಕದೊಂದಿಗೆ ಸಬರ್ ಜೋಷ್ಣಾ
ಪದಕದೊಂದಿಗೆ ಸಬರ್ ಜೋಷ್ಣಾ   

ನವದೆಹಲಿ: ಭಾರತದ ಜ್ಯೋಷ್ನಾ ಸಬರ್ ಅವರು ಏಷ್ಯನ್‌ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 40 ಕೆ.ಜಿ. ವಿಭಾಗದಲ್ಲಿ ಶುಕ್ರವಾರ ಎರಡು ಕಂಚಿನ ಪದಕಗಳನ್ನು ಗೆದ್ದರು.

ಗ್ರೇಟರ್‌ ನೋಯ್ಡಾದ ಗೌತಮ್‌ ಬುದ್ಧ ವಿಶ್ವವಿದ್ಯಾಲಯದಲ್ಲಿ ಚಾಂಪಿಯನ್‌ಷಿಪ್‌ ಗುರುವಾರ ಆರಂಭಗೊಂಡಿದ್ದು, ಆಗಸ್ಟ್‌ 5ರವರೆಗೆ ನಡೆಯಲಿದೆ. ಜ್ಯೋಷ್ನಾ ಅವರು ಕ್ಲೀನ್‌ ಮತ್ತು ಜರ್ಕ್‌ ಹಾಗೂ ಸ್ನ್ಯಾಚ್ ವಿಭಾಗದಲ್ಲಿ ಕಂಚು ಗೆದ್ದರು.

ಪುರುಷರ 49 ಕೆ.ಜಿ ಯೂತ್‌ ವಿಭಾಗದಲ್ಲಿ ಫಿಲಿಪೀನ್ಸ್‌ನ ಡೆಲೋಸ್ ಸ್ಯಾಂಟೋಸ್ ಮತ್ತು ಬೊರೆಸ್ ಎರಾನ್  ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದರು.

ADVERTISEMENT

ಏಷ್ಯಾದ 18 ದೇಶಗಳ 220 ವೇಟ್‌ಲಿಫ್ಟರ್‌ಗಳು ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.