
ಪಿಟಿಐ
ಕೆನ್‌ಬೆರಾ: ಭಾರತ ಜೂನಿಯರ್ ಮಹಿಳಾ ಹಾಕಿ ತಂಡ, ಆಸ್ಟ್ರೇಲಿಯಾ ಪ್ರವಾಸದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ 21 ವರ್ಷದೊಳಗಿನವರ ತಂಡದ ಎದುರು 0–5 ಗೋಲುಗಳ ಸೋಲು ಅನುಭವಿಸಿತು.
ಮಕಲ್ಯಾ ಜೋನ್ಸ್ (10, 11, 52ನೇ ನಿಮಿಷ) ಹ್ಯಾಟ್ರಿಕ್ ಸಾಧಿಸಿದರೆ, ಸಮಿ ಲೋವ್ (38ನೇ ನಿಮಿಷ) ಮತ್ತು ಮಿಗಾಲಿಯಾ ಹೊವೆಲ್ (50ನೇ ನಿಮಿಷ) ಅವರು ಆತಿಥೇಯ ತಂಡಕ್ಕೆ ಇತರ ಮೂರು ಗೋಲುಗಳನ್ನು ತಂದಿತ್ತರು.
ಇದು ತಂಡಕ್ಕೆ ಎರಡನೇ ಸೋಲು. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ 2–3 ಅಂತರದಲ್ಲಿ ಸೋಲನುಭವಿಸಿತ್ತು.
ಇದೇ ಎದುರಾಳಿಯ ವಿರುದ್ಧ ಭಾರತ ಸೋಮವಾರ ತನ್ನ ಮೂರನೇ ಪಂದ್ಯ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.