ADVERTISEMENT

FIA ಏಷ್ಯಾ ಪೆಸಿಫಿಕ್‌ ರ‍್ಯಾಲಿ ಚಾಂಪಿಯನ್‌ಷಿಪ್: ಕರ್ಣ–ಶರೀಫ್‌ ಜೋಡಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:50 IST
Last Updated 27 ಏಪ್ರಿಲ್ 2025, 15:50 IST
ಪ್ರಶಸ್ತಿಯೊಂದಿಗೆ ಕರ್ಣ ಕಡೂರು ಮತ್ತು ಕೇರಳದ  ಮೂಸಾ ಶರೀಫ್
ಪ್ರಶಸ್ತಿಯೊಂದಿಗೆ ಕರ್ಣ ಕಡೂರು ಮತ್ತು ಕೇರಳದ  ಮೂಸಾ ಶರೀಫ್   

ಚೆನ್ನೈ: ಹಾಲಿ ರಾಷ್ಟ್ರೀಯ ಚಾಂಪಿಯನ್ ಕರ್ಣ ಕಡೂರು ಮತ್ತು ಅನುಭವಿ ಸಹಚಾಲಕ ಮೂಸಾ ಶರೀಫ್ ಅವರು ಭಾನುವಾರ ಎಫ್‌ಐಎ ಏಷ್ಯಾ ಪೆಸಿಫಿಕ್‌ ರ‍್ಯಾಲಿ ಚಾಂಪಿಯನ್‌ಷಿಪ್‌ನ ಇಂಡಿಯಾ ಸುತ್ತಿನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಮದ್ರಾಸ್‌ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ ಭಾನುವಾರ ಮುಕ್ತಾಯವಾದ ರೇಸ್‌ನಲ್ಲಿ ಅರ್ಕ ಮೋಟಾರ್‌ ಸ್ಪೋರ್ಟ್ಸ್‌ನ ಬೆಂಗಳೂರಿನ ಕರ್ಣ– ಕೇರಳದ ಮೂಸಾ ಜೋಡಿಯು ನಾಲ್ಕು ಹಂತಗಳಲ್ಲಿ ಅಮೋಘ ಪ್ರದರ್ಶನ ನೀಡಿ 1 ನಿಮಿಷ 50.8 ಸೆಕೆಂಡುಗಳ ಮುನ್ನಡೆಯೊಂದಿಗೆ ಚಾಂಪಿಯನ್‌ ಆಯಿತು. 36 ವರ್ಷ ವಯಸ್ಸಿನ ಕರ್ಣ ಅವರಿಗೆ  ಇದು ಮೂರನೇ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ. 

ಎರಡು ಬಾರಿಯ ರಾಷ್ಟ್ರೀಯ ಚಾಂಪಿಯನ್ ಕೋಲ್ಕತ್ತಾದ ಅಮಿತ್‌ರಜಿತ್ ಘೋಷ್ ಮತ್ತು ಮಂಗಳೂರಿನ ಅಶ್ವಿನ್ ನಾಯಕ್ ಅವರು ಮೂರನೇ ಸ್ಥಾನ ಪಡೆದರು. ದೆಹಲಿಯ ಹರ್‌ಕೃಷ್ಣನ್ ವಾಡಿಯಾ ಮತ್ತು ಶಿಮ್ಲಾದ ಕುನಾಲ್ ಕಶ್ಯಪ್ ಎರಡನೇ ಸ್ಥಾನ ಗಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.