ADVERTISEMENT

ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಹಾಕಿ ಟೂರ್ನಿ: ಕರ್ನಾಟಕ ತಂಡಕ್ಕೆ ಧ್ರುವ ನಾಯಕತ್ವ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 15:36 IST
Last Updated 11 ಆಗಸ್ಟ್ 2025, 15:36 IST
   

ಬೆಂಗಳೂರು: ಧ್ರುವ ಬಿ.ಎಸ್‌. ಅವರು 15ನೇ ಹಾಕಿ ಇಂಡಿಯಾ ಜೂನಿಯರ್‌ ಪುರುಷರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

‘ಹಾಕಿ ಕರ್ನಾಟಕ’ವು ಈ ಟೂರ್ನಿಗೆ ರಾಜ್ಯ ತಂಡವನ್ನು ಸೋಮವಾರ ಪ್ರಕಟಿಸಿದೆ. ಥನು ನಂಜಪ್ಪ ಅವರು ಕೋಚ್‌ ಆಗಿ ಹಾಗೂ ಹರ್ಷಿತ್‌ ಅಯ್ಯಪ್ಪ ಎ.ಬಿ. ಅವರು ತಂಡದ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ತಂಡ ಇಂತಿದೆ: ಬೋಪಣ್ಣ ಬಿ.ಎನ್‌., ವಚನ್‌ ಕಾಳಪ್ಪ ಕೆ.ಎ., ವಿಶ್ವಜಿತ್‌ ಕೆ.ವಿ., ಹರ್ಷಿತ್‌ ಕುಮಾರ್‌ ಎಂ., ತನೀಷ್‌ ಆರ್‌. ಹುಲಕುಂದ, ರಾಜು ಎಂ. ಗಾಯಕವಾಡ, ಸಂಪನ್‌ ಗಣಪತಿ ಬಿ.‍ಪಿ., ಮಂಜೀತ್‌, ಕಿರಣ್‌ ರೆಡ್ಡಿ, ಪ್ರೇಮ್‌ಕುಮಾರ್‌ ಎಸ್‌.ಎಸ್‌., ಆಕರ್ಷ್‌ ಬಿದ್ದಪ್ಪ ಸಿ.ಜಿ., ಹರಪಾಲ್‌, ಪೂಜಿತ್‌ ಕೆ.ಆರ್‌., ಧ್ರುವ ಬಿ.ಎಸ್‌., ಹೃತಿಕ್‌ ಅಯ್ಯಪ್ಪ ಕೆ.ಡಿ., ನಿತೇಶ್‌ ಶರ್ಮಾ, ಕುಶಲ್‌ ಬೋಪಯ್ಯ ಸಿ.ಬಿ. ಹಾಗೂ ಎಂ.ಎಂ. ಅಚ್ಚಯ್ಯ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.