ADVERTISEMENT

ಕರ್ನಾಟಕ ಒಲಿಂಪಿಕ್ಸ್‌ | ಡ್ರ್ಯಾಗನ್‌ ಬೋಟ್‌ ಸ್ಪರ್ಧೆ: ಬೆಂಗಳೂರು ತಂಡಕ್ಕೆ ಚಿನ್ನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 23:14 IST
Last Updated 19 ಜನವರಿ 2026, 23:14 IST
ತುಮಕೂರಿನ ಅಮಾನಿಕೆರೆಯಲ್ಲಿ ಸೋಮವಾರ ನಡೆದ ಡ್ರ್ಯಾಗನ್‌ ಬೋಟ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಬೆಂಗಳೂರು ನಗರ ತಂಡ
ತುಮಕೂರಿನ ಅಮಾನಿಕೆರೆಯಲ್ಲಿ ಸೋಮವಾರ ನಡೆದ ಡ್ರ್ಯಾಗನ್‌ ಬೋಟ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಬೆಂಗಳೂರು ನಗರ ತಂಡ   

ತುಮಕೂರು: ಬೆಂಗಳೂರು ನಗರ ತಂಡವು ಇಲ್ಲಿ ನಡೆಯುತ್ತಿರುವ ಕರ್ನಾಟಕ ಒಲಿಂಪಿಕ್ಸ್‌ ಕ್ರೀಡಾಕೂಟದ ಡ್ರ್ಯಾಗನ್‌ ಬೋಟ್‌ 500 ಮೀಟರ್‌ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮೆರೆಯಿತು.

ಅಮಾನಿಕೆರೆಯಲ್ಲಿ ಸೋಮವಾರ ನಡೆದ ಸ್ಪರ್ಧೆಯಲ್ಲಿ ಬೆಂಗಳೂರು ನಗರ ತಂಡ ಪಾರಮ್ಯ ಸಾಧಿಸಿತು. ಬೆಂಗಳೂರು ಗ್ರಾಮಾಂತರ ತಂಡ ಬೆಳ್ಳಿ, ಚಿತ್ರದುರ್ಗ ತಂಡ ಕಂಚಿನ ಪದಕ ಜಯಿಸಿತು.

ಜೂನಿಯರ್‌ ಕಾಲೇಜು ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಪುರುಷರ ಕಬಡ್ಡಿ ಫೈನಲ್‌ನಲ್ಲಿ ತುಮಕೂರು ತಂಡವು ಶಿವಮೊಗ್ಗ ತಂಡವನ್ನು ಮಣಿಸಿ ಚಿನ್ನ ಗೆದ್ದಿತು. ಬೆಂಗಳೂರು ದಕ್ಷಿಣ ತಂಡ ಕಂಚಿನ ಪದಕ ತಮ್ಮದಾಗಿಸಿಕೊಂಡಿತು.

ADVERTISEMENT

ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡವು ತುಮಕೂರು ತಂಡಕ್ಕೆ ಸೋಲಿಸಿ ಸ್ವರ್ಣ ಪದಕ ಗೆದ್ದಿತು. ಚಿಕ್ಕಮಗಳೂರು ತಂಡ ಮೂರನೇ ಸ್ಥಾನ ಗಳಿಸಿತು.

ಇತರ ಫಲಿತಾಂಶ: ಜುಡೊ: ಪುರುಷರು: 100 ಕೆ.ಜಿ: ಎಸ್‌.ರವಿಚಂದ್ರ ಡೇರ್‌ (ಬೆಂಗಳೂರು ನಗರ)–1, ಸಂದೀಪ್‌ ಪಿ.ಲಮಾಣಿ (ವಿಜಯಪುರ)–2, ಓಂಕಾರ್‌ ಮಿನಾಚೆ (ಬೆಳಗಾವಿ)–3. 100 ಕೆ.ಜಿ ಮೇಲ್ಪಟ್ಟವರು: ಎನ್‌.ವಿಕಾಸ್‌ ಕುಮಾರ್‌ (ಮೈಸೂರು)–1, ರಾಹುಲ್‌ ಲಂಕೆನ್ನವರ್‌ (ಬೆಳಗಾವಿ)–  2.

ಮಹಿಳೆಯರು: 48 ಕೆ.ಜಿ– ರಮ್ಯಾ ಎ.ಜಿರಾಲಿ (ಬೆಳಗಾವಿ)–1, ಎಸ್.ಎಸ್.ಚೈತ್ರಾ (ದಾವಣಗೆರೆ)–2, ಎ.ಸಾಧಿಯಾ (ವಿಜಯನಗರ)–3.
52 ಕೆ.ಜಿ: ಎಸ್‌.ಆರತಿ (ವಿಜಯಪುರ)–1, ಸ್ವಾತಿ ನಾಯಕ್‌ (ಶಿವಮೊಗ್ಗ)–2, ಐಶ್ವರ್ಯ (ಮಂಡ್ಯ)–3.
57 ಕೆ.ಜಿ: ವಿ.ಎಸ್‌.ಶ್ರೀನಿಧಿ (ದಾವಣಗೆರೆ)–1, ಎನ್‌.ಲಕ್ಷ್ಮಿ (ವಿಜಯನಗರ)–2, ಎ.ಪಿ.ಪೂರ್ವಿ (ಮಂಡ್ಯ)–3.
73 ಕೆ.ಜಿ: ಅಕ್ಷತಾ ಟಿ.ಸುಂಕದ (ಬೆಳಗಾವಿ), ತನುಶ್ರೀ ವಿ.ಕಾಳೆ (ವಿಜಯಪುರ), ಆರ್‌.ಜಯಲಕ್ಷ್ಮಿ (ಮೈಸೂರು).

ವೇಟ್‌ ಲಿಫ್ಟಿಂಗ್: ಪುರುಷರು: 60 ಕೆ.ಜಿ: ಪ್ರಶಾಂತ್ ಸಿಂಗ್‌ (ದಕ್ಷಿಣ ಕನ್ನಡ)–1, ಕೆ.ಕವನ್‌ (ದಕ್ಷಿಣ ಕನ್ನಡ)–2, ಎಂ.ಕರಣ್‌ (ದಾವಣಗೆರೆ)–3.

ಮಹಿಳೆಯರು: 48 ಕೆ.ಜಿ: ಎಂ.ಶ್ರಾವ್ಯಾ (ದಕ್ಷಿಣ ಕನ್ನಡ)–1, ಪಿ.ಪಿ.ಹರ್ಷಿತಾ (ದಕ್ಷಿಣ ಕನ್ನಡ)–2, ಕೀರ್ತಿಕಾ ಕಾಸಿ (ಬೆಂಗಳೂರು ನಗರ)–3. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.