
(
ಬೆಂಗಳೂರು: ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ವಾಟರ್ ಪೋಲೊ ತಂಡಗಳು ಹೈದರಾಬಾದಿನ ಗಚ್ಚಿಬೌಲಿಯಲ್ಲಿ ನಡೆಯುತ್ತಿರುವ 36ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿದವು.
ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ ಬಾಲಕರ ತಂಡವು 23–4ರಿಂದ ಆಂಧ್ರಪ್ರದೇಶ ವಿರುದ್ಧ ಪಾರಮ್ಯ ಮೆರೆಯಿತು. ರಾಜ್ಯದ ಬಾಲಕಿಯರ ತಂಡವು 19–0ಯಿಂದ ಆಂಧ್ರಪದೇಶ ತಂಡವನ್ನು ಮಣಿಸಿತು.
ಏತನ್ಮಧ್ಯೆ, ಕರ್ನಾಟಕದ ಅನೀಶ್ ಅನಿರುದ್ಧ ಕೋರೆ 100 ಮೀಟರ್ ಬಟರ್‌ಫ್ಲೈ ಸ್ಪರ್ಧೆಯನ್ನು 58.20 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು.
ಫಲಿತಾಂಶ: ಈಜು (ಗುಂಪು 1): ಬಾಲಕರು: 800 ಮೀಟರ್ ಫ್ರೀಸ್ಟೈಲ್: ರೇಣುಕಾಚಾರ್ಯ ಹೊದಮನಿ (ಕರ್ನಾಟಕ, ಕಾಲ: 9ನಿ.04.66ಸೆ)–1, ಅಕ್ಷಜ್ ಪರಿಗಿ (ಕರ್ನಾಟಕ)–2, ಸ್ಮರಣ್ ನಲ್ಲೂರಿ (ತಮಿಳುನಾಡು)–3.
400 ಮೀಟರ್ ಮೆಡ್ಲೆ: ರಾಘವ್ ಎಸ್. (ಕರ್ನಾಟಕ, ಕಾಲ: 4ನಿ.51.16ಸೆ)–1, ಸೂರ್ಯ ಜೆ.ಟಿ. (ಕರ್ನಾಟಕ)–2, ಅಸ್ಜದ್ ಎಂ ಜಮೀಲ್ (ಪುದುಚೇರಿ)–3.
200 ಮೀಟರ್ ಬಟರ್‌ಫ್ಲೈ: ಸ್ವರೂಪ್ ಧನುಚೆ (ಕರ್ನಾಟಕ, ಕಾಲ: 2ನಿ.13.45ಸೆ)–1, ವೇದಾಂತ ವಿ ಮಧಿರ (ಕರ್ನಾಟಕ)–2, ಅಭಿನವ್ ವಿಜಿಕುಮಾರ್ (ಕೇರಳ)–3
100 ಮೀ ಫ್ರೀಸ್ಟೈಲ್: ಶ್ರೀಹರಿ (ಕೇರಳ, ಕಾಲ: 54.08)–1, ಸೂರ್ಯ ಜೆ.ಟಿ. (ಕರ್ನಾಟಕ)–2, ಕುಶಾಲ್ ಕೆ (ಕರ್ನಾಟಕ)–3.
ಬಾಲಕಿಯರು: 800 ಮೀಟರ್ ಫ್ರೀಸ್ಟೈಲ್: ಅದಿತಿ ವಿನಾಯಕ ರೆಲೆಕರ್ (ಕರ್ನಾಟಕ, ಕಾಲ: 9ನಿ.53.58ಸೆ)–1, ಅರ್ಣ (ತಮಿಳುನಾಡು)–2, ಮಿಹಿತಾ ದತ್ತ (ಕರ್ನಾಟಕ)–3
400 ಮೀಟರ್ ಮೆಡ್ಲೆ: ಪಾವನಿ ಸರಾಯು (ಆಂಧ್ರಪ್ರದೇಶ, ಕಾಲ: 5ನಿ.39.90ಸೆ)–1, ಹಿತಾಶ್ರೀ ಎನ್. (ಕರ್ನಾಟಕ)–2, ಪ್ರತೀಕ್ಷಾ ಎನ್.ಗೌಡ (ಕರ್ನಾಟಕ)–3.
200 ಮೀಟರ್ ಬಟರ್‌ಫ್ಲೈ: ವೈಷ್ಣವಿ ಜಿ (ಕರ್ನಾಟಕ, ಕಾಲ: 2ನಿ.45.81ಸೆ)–1, ಲಿಖಿತಾ (ತೆಲಂಗಾಣ)–2, ಜನ್ಯಾ ಬಿ.ಎಸ್. (ಕರ್ನಾಟಕ)–3.
100 ಮೀ ಫ್ರೀಸ್ಟೈಲ್: ತಿಸ್ಯ ಸೋನಾರ್ (ಕರ್ನಾಟಕ, ಕಾಲ: 1ನಿ.02.26ಸೆ)–1, ಆರ್ಣ ಎಂ.ಪಿ. (ತಮಿಳುನಾಡು)–2, ಮಿಹಿಕಾ ದತ್ತ (ಕರ್ನಾಟಕ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.