ADVERTISEMENT

ಕೆನ್ಯಾ ರಾಷ್ಟ್ರೀಯ ರ್‍ಯಾಲಿ ಗೆದ್ದ ನವೀನ್‌–ಮೂಸಾ ಜೋಡಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 23:57 IST
Last Updated 26 ಮಾರ್ಚ್ 2025, 23:57 IST
<div class="paragraphs"><p>ಕೆನ್ಯಾದ ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಷಿಪ್‌ ಆರ್‌ಸಿ3 ಗೆದ್ದ ಬಳಿಕ ಸಂಭ್ರಮಪಟ್ಟ ಮೂಸಾ ಷರೀಫ್‌ (ಎಡಗಡೆ) ಮತ್ತು ನವೀನ್ ಪುಲ್ಲಿಗಿಲ್ಲ</p></div>

ಕೆನ್ಯಾದ ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಷಿಪ್‌ ಆರ್‌ಸಿ3 ಗೆದ್ದ ಬಳಿಕ ಸಂಭ್ರಮಪಟ್ಟ ಮೂಸಾ ಷರೀಫ್‌ (ಎಡಗಡೆ) ಮತ್ತು ನವೀನ್ ಪುಲ್ಲಿಗಿಲ್ಲ

   

ನೈರೋಬಿ: ಹೈದರಾಬಾದ್‌ನ ನವೀನ್ ಪುಲ್ಲಿಗಿಲ್ಲ ಮತ್ತು ಸಹಚಾಲಕರಾದ ಕಾಸರಗೋಡಿನ ಮೂಸಾ ಷರೀಫ್ ಅವರನ್ನೊಳಗೊಂಡ ತಂಡ ಪ್ರತಿಷ್ಠಿತ ಆರ್‌ಸಿ3 ಕೆನ್ಯಾದ ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಪ್ರತಿಷ್ಠಿತ ಸಫಾರಿ ರ‍್ಯಾಲಿ ಕೆನ್ಯಾ 2025, ವಿಶ್ವ ರ್‍ಯಾಲಿ ಚಾಂಪಿಯನ್‌ಷಿಪ್‌ನ ಭಾಗವಾಗಿದೆ. ಆಫ್ರಿಕಾ ಇಕೊ ಮೋಟರ್‌ಸ್ಪೋರ್ಟ್‌ ತಂಡದಲ್ಲಿದ್ದ ಇವರು ಫೋರ್ಡ್‌ ಫಿಯೆಸ್ಟಾ ರ್‍ಯಾಲಿ3 ಚಲಾಯಿಸಿದರು.

ADVERTISEMENT

ವಿಶ್ವ ರ‍್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಮೊದಲ ಪೂರ್ಣಪ್ರಮಾಣದ ತಂಡ ಎಂಬ ಹಿರಿಮೆ ಇವರದಾಯಿತು.

‘ನಾವು ಸಾಗಬೇಕಾಗಿದ್ದ ಹಾದಿ ದುರ್ಗಮ ಮಾತ್ರ ಆಗಿರಲಿಲ್ಲ. ಮೊದಲ ಸಲ ಭಾಗವಹಿಸುವ ಸ್ಪರ್ಧಿಗಳಿಗೆ ಸವಾಲು ಒಡ್ಡುವಂತೆ ಇತ್ತು. ಹವಾಮಾನವೂ ಬದಲಾಗುತಿತ್ತು. ಆದರೆ ನಾವು ವೇಗ ಉಳಿಸಿಕೊಂಡು ಗುರಿ ತಲುಪಿದೆವು’ ಎಂದು ನವೀನ್ ಹೇಳಿದರು.

ಸಹ ಚಾಲಕರಾಗಿ ಮೂಸಾ ಅವರು 33 ವರ್ಷಗಳ ರ್‍ಯಾಲಿ ಅನುಭವ ಹೊಂದಿದ್ದಾರೆ. 330 ರ್‍ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಇವುಗಳಲ್ಲಿ 91 ಅಂತರರಾಷ್ಟ್ರೀಯ ಮಟ್ಟದ್ದು. 10 ಬಾರಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದಾರೆ. ಅವರು  ಭಾರತದ ಹಾಲಿ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್ ಸಹ ಚಾಲಕ ಕೂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.