ADVERTISEMENT

ದುರಂತದಲ್ಲಿ ಮೃತಪಟ್ಟ ಕೋಬಿ ಪತ್ನಿಯಿಂದ ಹೆಲಿಕಾಪ್ಟರ್ ಸಂಸ್ಥೆ ವಿರುದ್ಧ ದಾವೆ

ಏಜೆನ್ಸೀಸ್
Published 25 ಫೆಬ್ರುವರಿ 2020, 10:12 IST
Last Updated 25 ಫೆಬ್ರುವರಿ 2020, 10:12 IST
   

ಲಾಸ್‌ ಏಂಜಲಿಸ್‌:ಕಳೆದ ತಿಂಗಳು ಸಂಭವಿಸಿದಹೆಲಿಕಾಪ್ಟರ್‌ ದುರಂತದಲ್ಲಿ ಸಾವಿಗೀಡಾದ ಬಾಸ್ಕೆಟ್‌ಬಾಲ್‌ ದಿಗ್ಗಜ ಕೋಬಿ ಬ್ರಯಾಂಟ್‌ ಪತ್ನಿ ವನೆಸ್ಸಾ ಅವರು ಹೆಲಿಕಾಪ್ಟರ್ ಕಂಪೆನಿ ವಿರುದ್ಧ ದಾವೆ ಹೂಡಿದ್ದಾರೆ.

ಜನವರಿ 26ರಂದು ಸಂಭವಿಸಿದ್ದ ಅವಘಡದಲ್ಲಿ ಕೋಬಿ ಮಾತ್ರವಲ್ಲದೆ, ಅವರ 13 ವರ್ಷದ ಮಗಳು ಗಿಯೆನ್ನಾ ಬ್ರಯಾಂಟ್‌, ಸಹ ಆಟಗಾರರಾದ ಅಲ್ಯಸ್ಸಾ ಆಲ್ಟೊಬೆಲ್ಲಿ ಮತ್ತು ಪೇಯ್ಟಾನ್‌ ಚೇಸ್ಟರ್‌, ಅಲ್ಯಸ್ಸಾ ಪೋಷಕರಾದ ಜಾನ್‌ ಮತ್ತು ಕೆರ್ರಿ,ಚೇಸ್ಟರ್‌ನ ತಾಯಿ ಸಾರಾ, ತರಬೇತುದಾರ ಕ್ರಿಸ್ಟಿನಾ ಮೌಸೆರ್‌ ಮತ್ತುಫೈಲಟ್‌ ಅರಾ ಝೋಬಯಾನ್‌ ಸಾವಿಗೀಡಾಗಿದ್ದರು.

ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆ ನಡೆಸುತ್ತಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೇ ಯಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.ಮೃತರ ಸ್ಮರಣಾರ್ಥ ಸ್ಟೇಪ್ಲಸ್‌ ಸೆಂಟರ್‌ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದ ಬಳಿಕ ವನೆಸ್ಸಾ ಅವರು ಇಲ್ಲಿನ ಸುಪೀರಿಯರ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ.

ಐಸ್‌ಲ್ಯಾಂಡ್ ಎಕ್ಸ್‌ಪ್ರೆಸ್‌ ಒಡೆತನದ ಐಸ್‌ಲ್ಯಾಂಡ್‌ ಹೆಲಿಕಾಪ್ಟರ್‌ ಕಂಪೆನಿ ವಿರುದ್ಧ ದಾಖಲಾಗಿರುವ ಮೊಕದ್ದಮೆಯಲ್ಲಿ, ‘ದಟ್ಟ ಮಂಜು ಮತ್ತು ಮೋಡ ಇದ್ದರೂ ಹೆಲಿಕಾಪ್ಟರ್‌ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು’ ಎಂದು ಆರೋಪಿಸಲಾಗಿದೆ.

‘ಅಮೆರಿಕದ ಸಾರಿಗೆ ಇಲಾಖೆಯ ಫೆಡರಲ್‌ ವಿಮಾನಯಾನ ಆಡಳಿತದ ವಿಷುವಲ್ಸ್‌ ಫ್ಲೈಟ್‌ ನಿಯಮಗಳಿಗೆ (ವಿಎಫ್‌ಆರ್‌)ಅನುಸಾರವಾಗಿಯೇಐಸ್‌ಲ್ಯಾಂಡ್‌ ಎಕ್ಸ್‌ಪ್ರೆಸ್‌ ಹೆಲಿಕಾಪ್ಟರ್‌ ಹಾರಾಟನಡೆಸಬೇಕಿತ್ತು. ಆ ನಿಯಮವನ್ನು ಉಲ್ಲಂಘಿಸಲಾಗಿದೆ’ ಎಂದೂ ಉಲ್ಲೇಖಿಸಲಾಗಿದೆ.ವಿಮಾನ ಅಥವಾ ಹೆಲಿಕಾಪ್ಟರ್‌ ಸಾಗುತ್ತಿರುವ ಮಾರ್ಗ ಪೈಲಟ್‌ಗೆ ಸ್ಪಷ್ಟವಾಗಿ ಕಾಣುತ್ತಿರಬೇಕು ಎಂದುವಿಎಫ್‌ಆರ್‌ ನಿಯಮ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.