ADVERTISEMENT

ಚೆಸ್‌: ಕ್ರಾಮ್ನಿಕ್‌ ತರಬೇತಿ

ಪಿಟಿಐ
Published 30 ಡಿಸೆಂಬರ್ 2019, 19:46 IST
Last Updated 30 ಡಿಸೆಂಬರ್ 2019, 19:46 IST
ವ್ಲಾಡಿಮಿರ್‌ ಕ್ರಾಮ್ನಿಕ್‌– ರಾಯಿಟರ್ಸ್ ಚಿತ್ರ
ವ್ಲಾಡಿಮಿರ್‌ ಕ್ರಾಮ್ನಿಕ್‌– ರಾಯಿಟರ್ಸ್ ಚಿತ್ರ   

ಚೆನ್ನೈ: ವಿಶ್ವ ಮಾಜಿ ಚಾಂಪಿಯನ್ ರಷ್ಯಾದ ವ್ಲಾಡಿಮಿರ್‌ ಕ್ರಾಮ್ನಿಕ್‌ ಅವರು ವಿಶ್ವದ ಎರಡನೇ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ಸೇರಿದಂತೆ ಭಾರತದ 14 ಚೆಸ್‌ ಪಟುಗಳಿಗೆ ತರಬೇತಿ ನೀಡಲಿದ್ದಾರೆ. 10 ದಿನಗಳ ತರಬೇತಿ ಶಿಬಿರವು ಜನವರಿ 8ರಂದು ಇಲ್ಲಿ ಆರಂಭವಾಗಲಿದೆ.

ಕ್ರಾಮ್ನಿಕ್‌ ಅವರೊಂದಿಗೆ ಆರು ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿರುವ ಬೆಲಾ ರಸ್‌ನ ಬೊರಿಸ್‌ ಗೆಲ್‌ ಫ್ಯಾಂಡ್‌ ಕೂಡ ತರಬೇತಿ ನೀಡಲಿದ್ದಾರೆ.

ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಚೆಸ್‌ ಪಟುಗಳು: ಪ್ರಗ್ಯಾನಂದ, ಗುಕೇಶ್‌, ರೌನಕ್‌ ಸಾಧ್ವಾನಿ. ಪ್ರೀತು ಗುಪ್ತಾ, ಪಿ.ಇನಿಯಾನ್‌, ಅರ್ಜುನ್‌ ಎರಿಗೈಸಿ (ಎಲ್ಲರೂ ಗ್ರ್ಯಾಂಡ್‌ಮಾಸ್ಟರ್ಸ್), ಲಿಯೊನ್ ಮೆಂಡೊನ್ಸಾ, ಶ್ರೀಶ್‌ವಾನ್‌ ಮರಲಕ್ಷಿಕಾರಿ, ಆದಿತ್ಯ ಮಿತ್ತಲ್‌, ಅರ್ಜುನ್‌ ಕಲ್ಯಾಣ್‌, ಭರತ್‌ ಸುಬ್ರಮಣ್ಯಂ, ರಾಹಿಲ್‌ ಮುಲ್ಲಿಕ್‌ (ಎಲ್ಲರೂ ಅಂತರರಾಷ್ಟ್ರೀಯ ಮಾಸ್ಟರ್ಸ್), ರಕ್ಷಿತಾ ರವಿ ಮತ್ತು ಆರ್‌. ವೈಶಾಲಿ (ಅಂತರರಾಷ್ಟ್ರೀಯ ಮಹಿಳಾ ಮಾಸ್ಟರ್ಸ್).

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.