ADVERTISEMENT

ಕೃಷ್ಣಾ ಪೂನಿಯಾಗೆ ಕೋವಿಡ್‌

ಪಿಟಿಐ
Published 18 ಏಪ್ರಿಲ್ 2021, 13:01 IST
Last Updated 18 ಏಪ್ರಿಲ್ 2021, 13:01 IST
ಕೃಷ್ಣಾ ಪೂನಿಯಾ
ಕೃಷ್ಣಾ ಪೂನಿಯಾ   

ನವದೆಹಲಿ: ಕಾಮನ್‌ವೆಲ್ತ್‌ ಗೇಮ್ಸ್ ಚಿನ್ನದ ಪದಕ ವಿಜೇತೆ, ರಾಜಸ್ಥಾನದ ಶಾಸಕಿ ಕೃಷ್ಣಾ ಪೂನಿಯಾ ಅವರಿಗೆ ಕೋವಿಡ್‌–19 ಇರುವುದು ಭಾನುವಾರ ಖಚಿತಪಟ್ಟಿದೆ. ಸದ್ಯ ಅವರು ಜೈಪುರದರಾಜಸ್ಥಾನ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಯುಎಚ್‌ಎಸ್‌) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

43 ವರ್ಷದ ಕೃಷ್ಣಾ, 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಡಿಸ್ಕಸ್ ಥ್ರೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಇದರೊಂದಿಗೆ ಕ್ರೀಡಾಕೂಟದ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ಚಿನ್ನ ಗಳಿಸಿದ ಭಾರತದ ಮೊದಲ ಮಹಿಳಾ ಅಥ್ಲೀಟ್‌ ಎನಿಸಿಕೊಂಡಿದ್ದರು.

‘ಕೃಷ್ಣಾಗೆ ಕೆಮ್ಮು ಮತ್ತು ಸೌಮ್ಯ ಜ್ವರದ ಲಕ್ಷಣ ಇತ್ತು. ಶನಿವಾರ ಪರೀಕ್ಷೆಗೆ ಒಳಪಟ್ಟಾಗ ಸೋಂಕು ಪತ್ತೆಯಾಗಿರಲಿಲ್ಲ. ಆದರೆ, ಆರ್‌ಯುಎಚ್‌ಎಸ್‌ನಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದಾಗ ಕೋವಿಡ್ ಇರುವುದು ದೃಢಪಟ್ಟಿದೆ‘ ಎಂದು ಕೃಷ್ಣಾ ಅವರ ಪತಿ ವೀರೇಂದ್ರ ಪೂನಿಯಾ ತಿಳಿಸಿದ್ದಾರೆ.

ADVERTISEMENT

ಕೃಷ್ಣಾ ಅವರು ರಾಜಸ್ಥಾನದ ಸಾದುಲ್ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕಿಯಾಗಿದ್ದಾರೆ.

‘ಶುಕ್ರವಾರ ಅವರು ಕೋವಿಡ್‌ ಲಸಿಕೆ ಪಡೆದಿದ್ದರು‘ ಎಂದು ವೀರೇಂದ್ರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.