ADVERTISEMENT

ಇಂಡಿಯಾ ಓಪನ್‌ ಟೂರ್ನಿಯಿಂದ ಹೊರಬಿದ್ದ ಲಕ್ಷ್ಯ ಸೇನ್

ಪಿಟಿಐ
Published 16 ಜನವರಿ 2026, 15:58 IST
Last Updated 16 ಜನವರಿ 2026, 15:58 IST
<div class="paragraphs"><p> ಲಕ್ಷ್ಯ ಸೇನ್ </p></div>

ಲಕ್ಷ್ಯ ಸೇನ್

   

ಪಿಟಿಐ ಚಿತ್ರ

ನವದೆಹಲಿ: ವಿಶ್ವದ 12ನೇ ಕ್ರಮಾಂಕದ ಆಟಗಾರ ಲಿನ್‌ ಚುನ್‌–ಯಿ ಎದುರು ಭಾರತದ ಲಕ್ಷ್ಯ ಸೇನ್ ತೀವ್ರ ಹೋರಾಟ ಪ್ರದರ್ಶಿಸಿದರೂ, ಮೂರು ಗೇಮ್‌ಗಳ ಪಂದ್ಯದ ನಿರ್ಣಾಯಕ ಹಂತದಲ್ಲಿ ಎಡವಿದರು. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಸೋಲುವುದರೊಂದಿಗೆ ಇಂಡಿಯಾ ಓಪನ್ ಸೂಪರ್ 750 ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ADVERTISEMENT

ಉತ್ತರಾಖಂಡದ ಅಲ್ಮೋರಾದ 24 ವರ್ಷ ವಯಸ್ಸಿನ ಆಟಗಾರ 21–17, 13–21, 18–21 ರಲ್ಲಿ ತೈವಾನ್‌ನ ಲಿನ್‌ ಚುನ್ ಅವರಿಗೆ ಮಣಿದರು. ತೀವ್ರ ಹಣಾಹಣಿಯ ಪಂದ್ಯದಲ್ಲಿ ಇಬ್ಬರೂ ಅತ್ಯುತ್ತಮ ಮಟ್ಟದಲ್ಲಿ ಆಡಿದರು.

ದೀರ್ಘ ರ್‍ಯಾಲಿಗಳು, ನೆಟ್‌ ಬಳಿ ಕೌಶಲದ ಹೊಡೆತಗಳು ಕಾಣಸಿಕ್ಕಿದವು. ಮೂರು ಗೇಮ್‌ಗಳ ದೀರ್ಘ ಪಂದ್ಯದಲ್ಲಿ ಇಬ್ಬರೂ ಪರಸ್ಪರರ ಸಂಯಮ ಪರೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.