ADVERTISEMENT

ಆಲ್ ಇಂಗ್ಲೆಂಡ್‌ ಓಪನ್: ಮಾರ್ಕ್ ಕಲ್ಜೊವ್‌ಗೆ ಮಣಿದ ಲಕ್ಷ್ಯಸೇನ್

ಪಿಟಿಐ
Published 19 ಮಾರ್ಚ್ 2021, 16:17 IST
Last Updated 19 ಮಾರ್ಚ್ 2021, 16:17 IST
ಮಾರ್ಕ್ ಕಲ್ಜೊವ್ ಎದುರಿನ ಪಂದ್ಯದಲ್ಲಿ ಷಟಲ್ ರಿಟರ್ನ್ ಮಾಡಲು ಪ್ರಯತ್ನಿಸಿದ ಲಕ್ಷ್ಯಸೇನ್ –ಎಎಫ್‌ಪಿ ಚಿತ್ರ
ಮಾರ್ಕ್ ಕಲ್ಜೊವ್ ಎದುರಿನ ಪಂದ್ಯದಲ್ಲಿ ಷಟಲ್ ರಿಟರ್ನ್ ಮಾಡಲು ಪ್ರಯತ್ನಿಸಿದ ಲಕ್ಷ್ಯಸೇನ್ –ಎಎಫ್‌ಪಿ ಚಿತ್ರ   

ಬರ್ಮಿಂಗ್‌ಹ್ಯಾಂ: ಭಾರತದ ಯುವ ಆಟಗಾರ ಲಕ್ಷ್ಯ ಸೇನ್ ಅವರು ಆಲ್‌ ಇಂಗ್ಲೆಂಡ್‌ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಿರಾಸೆ ಅನುಭವಿಸಿದರು. ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಮಾರ್ಕ್ ಕಲ್ಜೊವ್‌ ಎದುರು ಸೇನ್ 17-21, 21-16, 17-21ರಲ್ಲಿ ಸೋತರು.

ಮಹಿಳೆಯರ ಡಬಲ್ಸ್‌ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಕೂಡ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದರು.

55 ನಿಮಿಷಗಳ ಹಣಾಹಣಿಯ ಎರಡನೇ ಗೇಮ್‌ನಲ್ಲಿ ಲಕ್ಷ್ಯ ಸೇನ್ ಎದುರಾಳಿಗೆ ತಿರುಗೇಟು ನೀಡಿದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಆಧಿಪತ್ಯ ಸ್ಥಾಪಿಸಿದ ಕಲ್ಜೊವ್ ಪಂದ್ಯ ಗೆದ್ದು ಸಂಭ್ರಮಿಸಿದರು.

ADVERTISEMENT

ಅಶ್ವಿನಿ ಮತ್ತು ಸಿಕ್ಕಿ ರೆಡ್ಡಿ ನೆದರ್ಲೆಂಡ್ಸ್‌ನ ಸೆಲೆನಾ ಪೀಕ್ ಮತ್ತು ಚೆರಿಲ್ ಸೀನೆನ್‌ ಜೋಡಿಗೆ 22-24, 12-21ರಲ್ಲಿ ಮಣಿದರು. ಈ ಪಂದ್ಯ 39 ನಿಮಿಷಗಳಲ್ಲಿ ಮುಗಿಯಿತು. ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಡೆನ್ಮಾರ್ಕ್‌ನ ಕಿಮ್ ಆಸ್ಟ್ರುಪ್‌ ಮತ್ತು ಆ್ಯಂಡೆರ್ಸ್‌ ಸ್ಕಾರುಪ್ ಎದುರು16-21, 21-11, 17-21ರಲ್ಲಿ ಸೋತರು.

ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮಾ ಡೆನ್ಮಾರ್ಕ್‌ನ ಆ್ಯಂಡೆರ್ಸ್ ಆ್ಯಂಟೊನ್ಸೆನ್‌ ವಿರುದ್ಧ 20–22, 10–21ರಲ್ಲಿ ಪರಾಭವಗೊಂಡರು. ಮಿಶ್ರ ಡಬಲ್ಸ್‌ನಲ್ಲಿ ಧ್ರುವ ಕಪಿಲಾ ಮತ್ತು ಮೇಘನಾ ಜಕ್ಕಂಪುಡಿ ಜೋಡಿ ಡೆನ್ಮಾರ್ಕ್‌ನ ನಿಕ್ಲಾಸ್ ನೊಹ್ರ್‌ ಮತ್ತು ಅಮೇಲಿ ಮಗೆಲುಂಡ್ ಜೋಡಿಗೆ 19–21, 8–21ರಲ್ಲಿ ಮಣಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.