
ಪಿಟಿಐ
ನವದೆಹಲಿ: ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಶಿ ಶುನ್ಯಾವೊ ಅವರಿಗೆ ಆಘಾತ ನೀಡಿದ ಭಾರತದ ಅಗ್ರ ಆಟಗಾರ್ತಿ ಮಣಿಕಾ ಬಾತ್ರಾ ಅವರು ಲಂಡನ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್ ಟೂರ್ನಿಯಲ್ಲಿ ಶನಿವಾರ ಕ್ವಾರ್ಟರ್‌ಫೈನಲ್ ತಲುಪಿದರು.
ವಿಶ್ವ ಕ್ರಮಾಂಕದಲ್ಲಿ 43ನೇ ಸ್ಥಾನದಲ್ಲಿರುವ ಮತ್ತು ಇಲ್ಲಿ 16ನೇ ಶ್ರೇಯಾಂಕ ಪಡೆದಿರುವ ಬಾತ್ರಾ ಅವರು ಕಾಪರ್ ಬಾಕ್ಸ್ ಅರೇನಾದಲ್ಲಿ ನಡೆದ 16ರ ಸುತ್ತಿನ ಪಂದ್ಯದಲ್ಲಿ 11–6, 11–4, 8–11, 11–9 ರಿಂದ ಚೀನಾದ ಆಟಗಾರ್ತಿ ವಿರುದ್ಧ ಜಯಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.