ADVERTISEMENT

ಬಾಕ್ಸಿಂಗ್‌: ಮನೀಷ್ ಕೌಶಿಕ್ ಕ್ವಾರ್ಟರ್ ಫೈನಲ್‌ಗೆ

ಪಿಟಿಐ
Published 3 ಮಾರ್ಚ್ 2021, 13:44 IST
Last Updated 3 ಮಾರ್ಚ್ 2021, 13:44 IST
ಮನೀಷ್ ಕೌಶಿಕ್ –ಪಿಟಿಐ ಚಿತ್ರ
ಮನೀಷ್ ಕೌಶಿಕ್ –ಪಿಟಿಐ ಚಿತ್ರ   

ನವದೆಹಲಿ: ಭಾರತದ ಮನೀಷ್ ಕೌಶಿಕ್ ಸ್ಪೇನ್‌ನ ಕ್ಯಾಸೆಲನೊದಲ್ಲಿ ನಡೆಯುತ್ತಿರುವ ಬಾಕ್ಸಮ್‌ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 63 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಅವರು ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದ ಮನೀಷ್ ಮಂಗಳವಾರ ರಾತ್ರಿ ನಡೆದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್‌ನ ಅಮಾರಿ ರಡೌನೆ ವಿರುದ್ಧ 5–0 ಅಂತರದ ಜಯ ಗಳಿಸಿದರು. ಎಂಟರ ಘಟ್ಟದ ಬೌಟ್‌ನಲ್ಲಿ ಮನೀಷ್‌ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಬೆಳ್ಳಿ ಪದಕ ಗಳಿಸಿರುವ ಕಜಕಸ್ತಾನದ ಸುಫಿವುಲಿನ್‌ ಜಾಕಿರ್ ಅವರನ್ನು ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT