
ಕೋಲ್ಕತ್ತ: ವಿಶ್ವ ಬಿಲಿಯರ್ಡ್ಸ್ ಮಾಜಿ ಚಾಂಪಿಯನ್ ಮನೋಜ್ ಕೊಠಾರಿ ಅವರು ಹೃದಯ ಸ್ತಂಭನದಿಂದಾಗಿ ಸೋಮವಾರ ಮೃತಪಟ್ಟಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಮನೋಜ್ ಅವರಿಗೆ ಪತ್ನಿ ಹಾಗೂ ಪುತ್ರ, ಮಾಜಿ ಬಿಲಿಯರ್ಡ್ಸ್ ಆಟಗಾರ ಸೌರವ್ ಕೊಠಾರಿ ಇದ್ದಾರೆ. ಅವರ ಕುಟುಂಬವು ಕೋಲ್ಕತ್ತದಲ್ಲಿ ನೆಲಸಿತ್ತು.
‘ಮನೋಜ್ ಅವರು ಯಕೃತ್ತಿನ ಕಸಿ ಮಾಡಿಸಿಕೊಳ್ಳಲು ತಮಿಳುನಾಡಿನ ತಿರುನಲ್ವೇಲಿಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. 10 ದಿನಗಳ ಹಿಂದೆ ಯಶಸ್ವಿಯಾಗಿ ಯಕೃತ್ತಿನ ಕಸಿ ಮಾಡಲಾಗಿತ್ತು. ಆದರೆ, ಸೋಮವಾರ ಬೆಳಿಗ್ಗೆ 7.30ಕ್ಕೆ ಹಠಾತ್ ಹೃದಯ ಸ್ತಂಭನ ಉಂಟಾಗಿ ಕೊನೆಯುಸಿರೆಳೆದರು’ ಎಂದು ಕುಟುಂಬದವರು ಪಿಟಿಐಗೆ ತಿಳಿಸಿದ್ದಾರೆ.
ಮನೋಜ್ ಅವರು ಬೆಂಗಳೂರಿನಲ್ಲಿ 1990ರಲ್ಲಿ ನಡೆದ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಮನೋಜ್ ಅವರ ಮಾರ್ಗದರ್ಶನದಲ್ಲಿ, ಪುತ್ರ ಸೌರವ್ ಅವರೂ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಪ್ರಶಸ್ತಿ ಜಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.