ADVERTISEMENT

ಮನಪ್ರೀತ್‌ ಸಿಂಗ್‌ ವರ್ಷದ ಆಟಗಾರ

ಪಿಟಿಐ
Published 23 ಫೆಬ್ರುವರಿ 2019, 18:26 IST
Last Updated 23 ಫೆಬ್ರುವರಿ 2019, 18:26 IST
ಮನಪ್ರೀತ್ ಸಿಂಗ್‌
ಮನಪ್ರೀತ್ ಸಿಂಗ್‌   

ನವದೆಹಲಿ: ಭಾರತ ಹಾಕಿ ತಂಡದ ನಾಯಕ ಮನಪ್ರೀತ್ ಸಿಂಗ್ ಅವರನ್ನು 2018ರ ವರ್ಷದ ಆಟಗಾರ ಪ್ರಶಸ್ತಿಗೆ ಏಷ್ಯಾ ಹಾಕಿ ಫೆಡರೇಷನ್ ಆಯ್ಕೆ ಮಾಡಿದೆ. ಸ್ಟ್ರೈಕರ್‌ ಲಾಲ್‌ರೆಮ್‌ಸಿಯಾಮಿ ಅವರನ್ನು ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಸ್ಕತ್‌ನಲ್ಲಿ ಕಳೆದ ವರ್ಷ ನಡೆದಿದ್ದ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಖ್ಯಾತಿ ಮನಪ್ರೀತ್ ಸಿಂಗ್ ಅವರದ್ದು. ಟೂರ್ನಿಯಲ್ಲಿ ತಂಡವು ಪಾಕಿಸ್ತಾನ ಜೊತೆ ಪ್ರಶಸ್ತಿ ಹಂಚಿಕೊಂಡಿತ್ತು.

ಬ್ರೇಡಾದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತಂಡ ಬೆಳ್ಳಿ ಪದಕ ಗಳಿಸುವಲ್ಲೂ ಮನಪ್ರೀತ್ ಸಿಂಗ್‌ ಅವರು ಮಹತ್ವದ ಪಾತ್ರ ವಹಿಸಿದ್ದರು.

ADVERTISEMENT

ಭಾರತ ಮಹಿಳಾ ತಂಡದ ಪ್ರಮುಖ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಲಾಲ್‌ರೆನ್ಸಿಯಾಮಿ ಕಳೆದ ವರ್ಷ ನಡೆದಿದ್ದ ಮಹಿಳೆಯರ ವಿಶ್ವಕಪ್ ಮತ್ತು ಏಷ್ಯಾ ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರು. ಬ್ಯೂನಸ್ ಐರಿಸ್‌ನಲ್ಲಿ ನಡೆದಿದ್ದ ಯೂತ್ ಒಲಿಂಪಿಕ್ಸ್‌ನಲ್ಲೂ ಅವರು ಅಮೋಘ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.