ADVERTISEMENT

ಪ್ರೊ ಲೀಗ್‌: ಆಸ್ಟ್ರೇಲಿಯಾ ವಿರುದ್ಧ ಪಂದ್ಯಕ್ಕೆ ಮನ್‌ಪ್ರೀತ್‌ ನಾಯಕ

ಭುವನೇಶ್ವರದಲ್ಲಿ 20 ಮತ್ತು 21ರಂದು ಪಂದ್ಯ

ಪಿಟಿಐ
Published 18 ಫೆಬ್ರುವರಿ 2020, 19:45 IST
Last Updated 18 ಫೆಬ್ರುವರಿ 2020, 19:45 IST
ಮನ್‌ಪ್ರೀತ್‌ ಸಿಂಗ್
ಮನ್‌ಪ್ರೀತ್‌ ಸಿಂಗ್   

ನವದೆಹಲಿ:ಆಸ್ಟ್ರೇಲಿಯಾ ತಂಡದ ವಿರುದ್ಧ ಭುವನೇಶ್ವರದಲ್ಲಿ ಇದೇ ತಿಂಗಳ 20 ಮತ್ತು 21ರಂದು ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯಗಳಲ್ಲಿ ಆಡಲಿರುವ ಭಾರತ ತಂಡಕ್ಕೆ ಮನ್‌ಪ್ರೀತ್‌ ಸಿಂಗ್ ನಾಯಕರಾಗಿದ್ದಾರೆ.

ಹಾಕಿ ಇಂಡಿಯಾ ಮಂಗಳವಾರ24 ಆಟಗಾರರ ತಂಡವನ್ನು ಪ್ರಕಟಿಸಿದ್ದು,ಹರ್ಮನ್‌ಪ್ರೀತ್‌ ಸಿಂಗ್‌ ಉಪನಾಯಕರಾಗಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ.

ADVERTISEMENT

ವಿಶ್ವದ ಅಗ್ರಮಾನ್ಯ ತಂಡ ಬೆಲ್ಜಿಯಂ ವಿರುದ್ಧ ಇತ್ತೀಚೆಗೆ ನಡೆದ ಪ್ರೊ ಲೀಗ್‌ ಪಂದ್ಯದಲ್ಲಿ ಮೊದಲನೆಯದನ್ನು ಭಾರತ 2–1 ರಿಂದ ಗೆದ್ದುಕೊಂಡಿತ್ತು. ಆದರೆ ಮರುಪಂದ್ಯದಲ್ಲಿ ಬೆಲ್ಜಿಯಂ 3–2ರಿಂದ ಜಯಿಸಿತ್ತು. ಭಾರತ ಇತ್ತೀಚಿನ ಸಾಧನೆಯಿಂದ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಈಗ ನಾಲ್ಕನೇ ಸ್ಥಾನಕ್ಕೇರಿದೆ.

‘ವಿಶ್ವ ಚಾಂಪಿಯನ್‌ ತಂಡದ ಎದುರು ಎರಡು ಪ್ರಬಲ ಪಂದ್ಯಗಳ ನಂತರ, ಈಗ ಆಸ್ಟ್ರೇಲಿಯಾದಂಥ ಮತ್ತೊಂದು ಬಲಿಷ್ಠ ತಂಡವನ್ನು ಎದುರಿಸುತ್ತಿದ್ದೇವೆ. ನಮ್ಮ ತಂಡವೂ ಪ್ರಬಲವಾಗಿದ್ದು ಸಮತೋಲನ ಹೊಂದಿದೆ’ ಎಂದು ಚೀಫ್‌ ಕೋಚ್‌ ಗ್ರಹಾಂ ರೀಡ್‌ ಹೇಳಿದರು.

ಭಾರತ ತಂಡ:ಪಿ.ಆರ್‌.ಶ್ರೀಜೇಶ್‌, ಕೃಷನ್‌ ಪಾಠಕ್‌, ಅಮಿತ್‌ ರೋಹಿದಾಸ್‌, ಸುರೇಂದರ್‌ ಕುಮಾರ್‌, ಬಿರೇಂದ್ರ ಲಾಕ್ರಾ, ಹರ್ಮನ್‌ಪ್ರೀತ್‌ ಸಿಂಗ್‌ (ಉಪನಾಯಕ), ವರುಣ್‌ ಕುಮಾರ್‌, ಗುರಿಂದರ್‌ ಸಿಂಗ್‌, ರೂಪಿಂದರ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌ (ನಾಯಕ), ವಿವೇಕ್‌ ಸಾಗರ್‌ ಪ್ರಸಾದ್, ಹಾರ್ದಿಕ್‌ ಸಿಂಗ್‌, ಚಿಂಗ್ಲೆನ್‌ಸನಾ ಸಿಂಗ್‌, ರಾಜಕುಮಾರ್‌ ಪಾಲ್‌, ಆಕಾಶದೀಪ್‌ ಸಿಂಗ್‌, ಸುಮಿತ್‌, ಲಲಿತ್‌ ಉಪಾಧ್ಯಾಯ, ಗುರುಸಾಹಿಬ್‌ಜಿತ್‌ ಸಿಂಗ್‌, ದಿಲ್‌ಪ್ರೀತ್‌ ಸಿಂಗ್‌, ಎಸ್‌.ವಿ.ಸುನೀಲ್‌, ಜರ್ಮನ್‌ಪ್ರೀತ್‌ ಸಿಂಗ್‌, ಸಿಮ್ರನ್‌ಜೀತ್‌ ಸಿಂಗ್, ನೀಲಕಂಠ ಶರ್ಮಾ, ರಮಣದೀಪ್‌ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.