ADVERTISEMENT

ಕೊಯಮತ್ತೂರು ರ‍್ಯಾಲಿ: ಮಸ್ಕರೇನ್ಹಸ್-ಕರುಂಬಯ್ಯ ಜೋಡಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 15:50 IST
Last Updated 27 ಜುಲೈ 2025, 15:50 IST
ಪ್ರಶಸ್ತಿ ಗೆದ್ದ ಕರ್ನಾಟಕದ ಡೀನ್ ಮಸ್ಕರೇನ್ಹಸ್ ಮತ್ತು ಸಹ ಚಾಲಕ ಕೆ.ಎಸ್. ಕರುಂಬಯ್ಯ ಜೋಡಿ
ಪ್ರಶಸ್ತಿ ಗೆದ್ದ ಕರ್ನಾಟಕದ ಡೀನ್ ಮಸ್ಕರೇನ್ಹಸ್ ಮತ್ತು ಸಹ ಚಾಲಕ ಕೆ.ಎಸ್. ಕರುಂಬಯ್ಯ ಜೋಡಿ   

ಬೆಂಗಳೂರು: ಕರ್ನಾಟಕದ ಡೀನ್ ಮಸ್ಕರೇನ್ಹಸ್ ಮತ್ತು ಸಹ ಚಾಲಕ ಕೆ.ಎಸ್. ಕರುಂಬಯ್ಯ ಜೋಡಿಯು ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲಿ ಕೊಯಮತ್ತೂರಿನ ಬ್ಲೂಬ್ಯಾಂಡ್ ರ‍್ಯಾಲಿಯನ್ನು ಗೆದ್ದುಕೊಂಡಿತು.

ಟೀಂ ಸಿಡ್ವಿನ್ ಇಂಡಿಯಾ ರೇಸಿಂಗ್ ತಂಡವನ್ನು ಪ್ರತಿನಿಧಿಸುತ್ತಿರುವ ಮಸ್ಕರೇನ್ಹಸ್– ಕರುಂಬಯ್ಯ ಜೋಡಿಗೆ ಬೆಂಗಳೂರಿನ ಅರ್ಕಾ ಮೋಟಾರ್‌ಸ್ಪೋರ್ಟ್ಸ್‌ನ ಕರ್ಣ ಕಡೂರು ಮತ್ತು ಅನುಭವಿ ಮೂಸಾ ಷರೀಫ್‌ ಅವರಿಂದ ನಿಕಟ ಸ್ಪರ್ಧೆ ಎದುರಾಯಿತು.

ಆದರೆ, ಮಂಗಳೂರು–ಕೊಡಗಿನ ಜೋಡಿಯು 1 ಗಂಟೆ 29 ನಿಮಿಷ ಮತ್ತು 9.4 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಜಯ ಸಾಧಿಸಿತು. ಈ ಮೂಲಕ ತಮ್ಮ ಚೊಚ್ಚಲ ಪ್ರವೇಶದಲ್ಲೇ ಗೆಲುವಿನ ಆರಂಭ ಪಡೆಯಿತು.

ADVERTISEMENT

ಕರ್ಣ ಕಡೂರು ಮತ್ತು ಮೂಸಾ ಜೋಡಿಯು (01:29:37.1) ಕೇವಲ 1.1 ಸೆಕೆಂಡ್‌ ಅಂತರದಲ್ಲಿ ಟಿಎಸ್‌ಐ ರೇಸಿಂಗ್‌ನ ಸಿಡ್ವಿನ್‌ನ ಆದಿತ್ಯ ಠಾಕೂರ್ ಮತ್ತು ವೀರೇಂದ್ರ ಕಶ್ಯಪ್ (01:29:38.2) ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.