ADVERTISEMENT

ವಿಶ್ಚಕಪ್ ಅರ್ಹತಾ ಪಂದ್ಯಕ್ಕೆ ಲಯೊನೆಲ್‌ ಮೆಸ್ಸಿ ಅಲಭ್ಯ

ಪಿಟಿಐ
Published 19 ಮಾರ್ಚ್ 2025, 0:08 IST
Last Updated 19 ಮಾರ್ಚ್ 2025, 0:08 IST
ಲಯೊನೆಲ್‌ ಮೆಸ್ಸಿ
ಲಯೊನೆಲ್‌ ಮೆಸ್ಸಿ   


ಮಾಂಟೆವಿಡಿಯೊ:
ಲಯೊನೆಲ್‌ ಮೆಸ್ಸಿ ಅವರು ತೊಡೆಸಂದು ನೋವಿನಿಂದಾಗಿ ಬಳಲುತ್ತಿರುವ ಕಾರಣ ಅರ್ಜೆಂಟೀನಾ ತಂಡವು, ಶುಕ್ರವಾರ ಉರುಗ್ವೆ ವಿರುದ್ದ ನಡೆಯಲಿರುವ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವನ್ನು ಅವರಿಲ್ಲದೇ ಆಡಬೇಕಾಗಿದೆ.

ಕಳೆದ ವಾರದ ಕೊನೆಯಲ್ಲಿ ಅವರು ಇಂಟರ್ ‌ಮಿಯಾಮಿ ಪರ, ಅಟ್ಲಾಂಟ ವಿರುದ್ಧ ಪಂದ್ಯದಲ್ಲಿ ಆಡುವಾಗ ತೊಡೆಸಂದು ನೋವಿಗೆ ಒಳಗಾಗಿದ್ದರು ಎಂದು ಅವರ ಕ್ಲಬ್ ಸೋಮವಾರ ತಿಳಿಸಿದೆ.ಎರಡು ಪಂದ್ಯಗಳಿಗೆ ಅರ್ಜೆಂಟೀನಾ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ.

ಈ ಪಂದ್ಯದ ನಂತರ, ಮಾರ್ಚ್ 25ರಂದು ಬ್ರೆಜಿಲ್ ವಿರುದ್ಧದ ಪಂದ್ಯವನ್ನೂ ಅವರು ಕಳೆದುಕೊಳ್ಳಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.