ಚೆನ್ನೈ: ಕೊರೊನಾ ಸೋಂಕು ತಡೆಗೆ ಲಾಕ್‌ಡೌನ್ ವಿಧಿಸಿದ್ದರಿಂದಾಗಿ ಸ್ಘಗಿತವಾಗಿದ್ದ ಕಾರ್ ಮತ್ತು ಬೈಕ್ ರೇಸ್ ಚಟುವಟಿಕೆಗಳನ್ನು ಮರಳಿ ಆರಂಭಿಸಲು ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಮುಂದಡಿ ಇಟ್ಟಿದೆ.
ತನ್ನ ಎಂ.ಎಂ.ಆರ್.ಟಿ ಸರ್ಕೀಟ್ ಅನ್ನು ಬುಧವಾರ ಮತ್ತೆ ತೆರೆದಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಟ್ರ್ಯಾಕ್‌ನಲ್ಲಿ ಬೈಕ್ ಮತ್ತು ಕಾರ್ ರೇಸ್‌ಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಜೂನ್ 14ರಂದು ಶುಲ್ಕಸಹಿತ ಅಭ್ಯಾಸಕ್ಕೆ ಅವಕಾಶ ನೀಡಲಿದೆ.
‘ಕ್ರೀಡೆತರ ಚಟುವಟಿಕೆಗಳಿಗೆ ಸದ್ಯ ಟ್ರ್ಯಾಕ್ ಅನ್ನು ಮುಕ್ತಗೊಳಿಸಲಾಗಿದೆ. ಮುಂಬರುವ ಪರಿಸ್ಥಿತಿ ಮತ್ತು ಸಮಸ್ಯೆಗಳು ಗೊತ್ತಿಲ್ಲ. ಹೊಸ ವಾತಾವರಣಕ್ಕೂ ಹೊಂದಿಕೊಳ್ಳುವ ಸವಾಲು ಇದೆ. ನಮ್ಮ ಸಿಬ್ಬಂದಿ, ಅಧಿಕಾರಿಗಳು, ಸ್ಪರ್ಧಿಗಳು ಮತ್ತು ಭೇಟಿ ನೀಡುವವರ ಆರೋಗ್ಯ ಸುರಕ್ಷತೆ ನಮಗೆ ಮುಖ್ಯ. ಯಾವುದೇ ವಿಷಯದಲ್ಲಿಯೂ ನಿರ್ಲಕ್ಷ್ಯ ಮಡುವುದಿಲ್ಲ’ ಎಂದು ಕ್ಲಬ್ ಉಪಾಧ್ಯಕ್ಷ ವಿಕಿ ಚಾಂದೋಕ್ ತಿಳಿಸಿದ್ದಾರೆ.
ಪ್ರಸ್ತುತ ಇರುವ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.