ADVERTISEMENT

ಹಿಮಾ ದಾಸ್‌ ಅಮಾನತು: ಮುಂದುವರಿದ ಗೊಂದಲ

ಪಿಟಿಐ
Published 25 ಡಿಸೆಂಬರ್ 2024, 19:11 IST
Last Updated 25 ಡಿಸೆಂಬರ್ 2024, 19:11 IST
ಹಿಮಾ ದಾಸ್‌
ಹಿಮಾ ದಾಸ್‌   

ನವದೆಹಲಿ: ಏಷ್ಯನ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಓಟಗಾರ್ತಿ ಹಿಮಾ ದಾಸ್‌ ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಘಟಕವು (ನಾಡಾ) ವಿಧಿಸಿದ್ದ ತಾತ್ಕಾಲಿಕ ಅಮಾನತು ಕುರಿತು ಗೊಂದಲ ಮುಂದುವರಿದಿದೆ.

24 ವರ್ಷದ ಓಟಗಾರ್ತಿಯ ಮೇಲೆ ನಾಡಾ 16 ತಿಂಗಳು ನಿಷೇಧ ಹೇರಿತ್ತು. 2023 ಜುಲೈ 22ರಿಂದ 2024ರ ನವೆಂಬರ್‌ 21ರವರೆಗೆ ಅಮಾನತು ಚಾಲ್ತಿಯಲ್ಲಿತ್ತು. ಆದರೆ, ಜೂನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಅವರು ಸ್ಪರ್ಧಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

12 ತಿಂಗಳ ಅವಧಿಯಲ್ಲಿ ತಮ್ಮ ಚಲನವಲನದ ಮಾಹಿತಿ ಒದಗಿಸಲು ವಿಫಲವಾದ ಕಾರಣ ಡೋಪಿಂಗ್‌ ನಿಗ್ರಹ ನಿಯಮದಂತೆ ಹಿಮಾ ದಾಸ್‌ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ನಾಡಾ ಇತ್ತೀಚೆಗೆ ಘೋಷಿಸಿದೆ.

ADVERTISEMENT

ಧಿಂಗ್‌ ಎಕ್ಸ್‌ಪ್ರೆಸ್‌ ಖ್ಯಾತಿಯ ಹಿಮಾ ದಾಸ್‌ ಅವರನ್ನು ನಿಯಮಾವಳಿಯ ಪ್ರಕಾರ ಅಮಾನತುಗೊಳಿಸಲಾಗಿದೆ ಎಂದು ನಾಡಾ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.  ಪ್ರಸ್ತುತ ಹಿಮಾ ಅವರು ತಿರುವನಂತಪುರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಅಮಾನತು ಅವಧಿ ನವೆಂಬರ್‌ ತನಕ ಇದ್ದರೂ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಇಂಡಿಯನ್  ಗ್ರ್ಯಾನ್‌ಪ್ರೀ ಕ್ರೀಡಾಕೂಟದಲ್ಲಿ ಮತ್ತು ಜೂನ್‌ನಲ್ಲಿ ಪಂಚಕುಲದಲ್ಲಿ  ನಡೆದಿದ್ದ ರಾಷ್ಟ್ರೀಯ ಅಂತರ ರಾಜ್ಯ ಕೂಟದಲ್ಲಿ ಅವರು ಸ್ಪರ್ಧಿಸಿದ್ದರಿಂದ ಗೊಂದಲ ಮೂಡಿದೆ.

ಈ ಕುರಿತು ಹಿಮಾ ದಾಸ್‌ ಅವರನ್ನು ಪಿಟಿಐ ಸಂಪರ್ಕಿಸಿದಾಗ, ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಆದರೆ, ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ನ (ಎಎಫ್‌ಐ) ಮೂಲವು ಅವರ ಅಮಾನತು ನವೆಂಬರ್‌ನಲ್ಲಿ ಮುಕ್ತಾಯವಾಗಿದೆ ಎಂದು ದೃಢಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.