ADVERTISEMENT

National Badminton Championships: ಶಿಖಾ– ಅಶ್ವಿನಿ ಜೋಡಿಗೆ ಡಬಲ್ಸ್ ಪ್ರಶಸ್ತಿ

ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 14:02 IST
Last Updated 28 ಡಿಸೆಂಬರ್ 2025, 14:02 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ವಿಜಯವಾಡ: ಅನುಭವಿ ಜೋಡಿಯಾದ ಶಿಖಾ ಗೌತಮ್ ಮತ್ತು ಅಶ್ವಿನಿ ಭಟ್‌ ಕೆ. ಅವರು ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಪ್ರಿಯಾದೇವಿ ಕೊಂಜೆಗ್ಬಾಮ್– ಶ್ರುತಿ ಮಿಶ್ರಾ ಜೋಡಿಯನ್ನು ನೇರ ಗೇಮ್‌ಗಳಿಂದ ಸೋಲಿಸಿ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದ ಕರ್ನಾಟಕದ ಶಿಖಾ– ಅಶ್ವಿನಿ ಜೋಡಿ 21–14, 21–18 ರಿಂದ ಮಣಿಪುರದ ಪ್ರಿಯಾದೇವಿ– ಉತ್ತರ ಪ್ರದೇಶದ ಶ್ರುತಿ ಮಿಶ್ರಾ ಅವರನ್ನು ಸೋಲಿಸಿತು.

ರಿತ್ವಿಕ್‌, ಸೂರ್ಯ ಚಾಂಪಿಯನ್ಸ್‌: ವಿಜಯವಾಡದ 19 ವರ್ಷ ವಯಸ್ಸಿನ ಸೂರ್ಯ ಚರಿಷ್ಮ ತಮಿರಿ ಅವರು 17–21, 21–12, 21–14 ರಿಂದ ಒಡಿಶಾದ ತನ್ವಿ ಪತ್ರಿ ಅವರನ್ನು ಸೋಲಿಸಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

ADVERTISEMENT

2024 ಒಡಿಶಾ ಮಾಸ್ಟರ್ಸ್‌ ವಿಜೇತ ರಿತ್ವಿಕ್ ಸಂಜೀವಿ (ತಮಿಳುನಾಡು) ಅವರು ಫೈನಲ್‌ನಲ್ಲಿ ತಮ್ಮ ಅಮೋಘ ರಕ್ಷಣೆಯ ಆಟದ ಬಲದಿಂದ ಹರಿಯಾಣದ ಭರತ್ ಭಾರ್ಗವ್ ಅವರನ್ನು 21–16, 22–20 ರಿಂದ ಸೋಲಿಸಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.