ADVERTISEMENT

ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌: ರಾಜ್ಯದ ಬಾಲಕಿಯರ ತಂಡಗಳ ಪ್ರಾಬಲ್ಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:41 IST
Last Updated 17 ಸೆಪ್ಟೆಂಬರ್ 2025, 5:41 IST
<div class="paragraphs"><p>ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ&nbsp;ಸಿಐಎಸ್‌ಸಿಇ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ 17 ವರ್ಷದೊಳಗಿನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು</p></div>

ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಸಿಐಎಸ್‌ಸಿಇ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ 17 ವರ್ಷದೊಳಗಿನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು

   

ರಾಂಚಿ: ಜಾರ್ಖಂಡ್‌ನ ರಾಂಚಿಯಲ್ಲಿ ಇತ್ತೀಚೆಗೆ ನಡೆದ ಸಿಐಎಸ್‌ಸಿಇ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ 14 ವರ್ಷ ಹಾಗೂ 17 ವರ್ಷದೊಳಗಿನ ಬಾಲಕಿಯರ ತಂಡ ಚಾಂಪಿಯನ್‌ ಆಗಿ ಹೊರಹಮ್ಮಿವೆ.

14 ವರ್ಷದೊಳಗಿನ ಬಾಲಕಿಯರ ತಂಡ ಫೈನಲ್‌ನಲ್ಲಿ ನಾರ್ತ್‌ ವೆಸ್ಟ್‌ ತಂಡವನ್ನು 4–1 ಗೋಲುಗಳಿಂದ ಪರಾಭವಗೊಳಿಸಿ ಟ್ರೋಫಿಗೆ ತನ್ನದಾಗಿಸಿಕೊಂಡಿತು.

ADVERTISEMENT

17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಾರ್ತ್‌ ವೆಸ್ಟ್ ತಂಡದ ಎದುರು ಕರ್ನಾಟಕ ತಂಡವು 5–1 ಗೋಲುಗಳ ಅಂತರದಲ್ಲಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡು ಟ್ರೋಫಿಗೆ ಮುತ್ತಿಕ್ಕಿತು. ಇದೇ ವಿಭಾಗದ ಬಾಲಕರ ತಂಡವು ಕಂಚಿನ ಪದಕ ಗೆದ್ದುಕೊಂಡಿತು.

ಬಾಲಕಿಯರ ತಂಡದಲ್ಲಿ ಬೆಂಗಳೂರಿನ ಕೋರಮಂಗಲದ ಚಿನ್ಮಯ ವಿದ್ಯಾಲಯದ 9ನೇ ತರಗತಿಯಲ್ಲಿ ಓದುತ್ತಿರುವ ಎಸ್. ಲಾಸ್ಯಾ ಒಟ್ಟು ಪಂದ್ಯಗಳಲ್ಲಿ 4 ಗೋಲುಗಳನ್ನು ಗಳಿಸಿದರು. 

14 ವರ್ಷದೊಳಗಿನ ತಂಡವನ್ನು ಸಿವಿಕೆ ವಿದ್ಯಾಲಯದ ಹಸಿರು ನಾಯಕತ್ವ ವಹಿಸಿಕೊಂಡಿದ್ದರು. 17 ವರ್ಷದೊಳಗಿನ ತಂಡವನ್ನು ಬಿಷಪ್ ಕಾಟನ್‌ನ ಕರಿಫ್‌ ಮುನ್ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.