ADVERTISEMENT

ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಕರ್ನಾಟಕ ಬಾಲಕಿಯರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 16:04 IST
Last Updated 1 ಫೆಬ್ರುವರಿ 2026, 16:04 IST
ಚಾಂಪಿಯನ್ ಆದ ಕರ್ನಾಟಕ ಮಹಿಳೆಯರ ತಂಡ. ಕುಳಿತವರು (ಎಡದಿಂದ): ತನುಶ್ರೀ, ಕೌಶಲ್ ರಾಮ್ (ವ್ಯವಸ್ಥಾಪಕ), ಪ್ರವೀಣ್ ಕುಮಾರ್ (ರಾಜ್ಯ ಸಂಸ್ಥೆಯ ಕಾರ್ಯದರ್ಶಿ), ಬಾಬುರೆಡ್ಡಿ ಹಾಗೂ ಸುದರ್ಶನ್ (ಕೋಚ್‌). ನಿಂತವರು: ಪ್ರೇಮಾ, ದುರ್ಗಾ, ವೇದ, ಶುಭಶ್ರೀ, ಗೀತಾ, ಹರ್ಷಿತಾ, ಸ್ಮಿತಾ, ಕವಿತಾ, ಸಾವಿತ್ರಿ, ಲಾಂಛನ

ಮಂಗಳೂರು: ತಮಿಳುನಾಡಿನ ಈರೋಡ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದ ಪ್ರಶಸ್ತಿ ಕರ್ನಾಟಕ ಗೆದ್ದುಕೊಂಡಿತು. ಬಾಲಕರ ತಂಡ ರನ್ನರ್ ಅಪ್ ಆಯಿತು.

ಭಾರತ ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಕರ್ನಾಟ ಬಾಲಕಿಯರು ಕಳೆದ ಬಾರಿಯ ಚಾಂಪಿಯನ್ ತಮಿಳುನಾಡು ವಿರುದ್ಧ 35–25, 35–31ರಲ್ಲಿ ಮಣಿಸಿದರು. ಸೆಮಿಫೈನಲ್‌ನಲ್ಲಿ ರಾಜ್ಯ ತಂಡ ಆಂಧ್ರಪ್ರದೇಶ ವಿರುದ್ಧ 35–28, 33–35, 35-20ರಲ್ಲಿ ಜಯ ಗಳಿಸಿತು.

ರಾಜ್ಯ ಬಾಲಕರ ತಂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತಮಿಳುನಾಡು ಎದುರು 26–35, 27–35ರಲ್ಲಿ ಸೋತಿತು. ಸೆಮಿಫೈನಲ್‌ನಲ್ಲಿ ರಾಜ್ಯ ತಂಡ ಆಂಧ್ರಪ್ರದೇಶ ವಿರುದ್ಧ ಜಯ ಗಳಿಸಿತ್ತು. ಬಾಲಕಿಯರ ತಂಡದ ನಾಯಕಿ ಗೀತಾ ಹಾಗೂ ಶುಭಶ್ರೀ, ಬಾಲಕರ ತಂಡದ ಚರಣ್ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಗಳಿಸಿದರು ಎಂದು ರಾಜ್ಯ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.