ADVERTISEMENT

ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌: ದಾವಣಗೆರೆಯ ಏಳು ಮಂದಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 19:45 IST
Last Updated 21 ಡಿಸೆಂಬರ್ 2021, 19:45 IST

ದಾವಣಗೆರೆ: ಒಡಿಶಾದ ಭುವನೇಶ್ವರದಲ್ಲಿ ಇದೇ 24ರಿಂದ 26ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾಗವಹಿಸಲು ರಾಜ್ಯದಿಂದ 15 ಮಂದಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಏಳು ಮಂದಿ ದಾವಣಗೆರೆಯವರು ಇದ್ದಾರೆ.

ಸುಧಾ ಎ., ಶಿಲ್ಪಾ ಕೆ., ರುದ್ರಪ್ರಸನ್ನ ಎಂ., ಇಂದೂಧರ ಬಿ.ಎಸ್‌., ಅಬ್ದುಲ್‌ ಗಫಾರ್‌ ಎ., ಪಾಂಡುರಂಗಸ್ವಾಮಿ ಬಿ.ಆರ್‌., ಹನುಮಂತ ಡಿ.ಎನ್‌. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವರು.

ಅಂಗವಿಕಲತೆಯ ಪ್ರಮಾಣಕ್ಕೆ ಅನುಗುಣವಾಗಿ 6 ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಅದರಲ್ಲಿ ಡಬ್ಲ್ಯುಎಚ್‌1 ಮತ್ತು ಡಬ್ಲ್ಯುಎಚ್‌2 ವಿಭಾಗಗಳಲ್ಲಿ ಈ ಏಳು ಮಂದಿ ಸ್ಪರ್ಧಿಸುತ್ತಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪ್ಯಾರಾ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ.ಎ.ಎಂ. ಶಿವಕುಮಾರ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಒಳಾಂಗಣ ಕ್ರೀಡಾಂಗಣದಲ್ಲಿ ಅವಕಾಶ ಕೂಡ ಇರಲಿಲ್ಲ. ಹೋರಾಟ ಮಾಡಿ ಸರ್ಕಾರಕ್ಕೆ ಪತ್ರ ಬರೆದು ಅವಕಾಶ ಗಿಟ್ಟಿಸಿಕೊಳ್ಳಲಾಗಿದೆ. ಈ ಏಳು ಮಂದಿ ಸ್ವಸಾಮರ್ಥ್ಯದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರಿಗೆ ಕೋಚ್‌ ಕೂಡ ಇಲ್ಲ. ಮುಂದೆ ಕೋಚ್‌ ವ್ಯವಸ್ಥೆ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜೆ.ಬಿ. ಉಮೇಶ್‌, ಉಪಾಧ್ಯಕ್ಷರಾದ ಇ.ದೇವೇಂದ್ರಪ್ಪ, ಬಿ.ಎಂ. ಕರಿಬಸಪ್ಪ, ನಿರ್ದೇಶಕ ಎನ್‌.ಎಚ್. ಬಸವರಾಜ್‌, ಕಲ್ಪೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.