ADVERTISEMENT

ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌: ಸಾಕ್ಷ್ಯಾಗೆ ಕಂಚು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 19:18 IST
Last Updated 8 ಡಿಸೆಂಬರ್ 2025, 19:18 IST
<div class="paragraphs"><p>ಸಾಕ್ಷ್ಯಾ ಸಂತೋಷ್‌</p></div>

ಸಾಕ್ಷ್ಯಾ ಸಂತೋಷ್‌

   

ಬೆಂಗಳೂರು: ಕರ್ನಾಟಕದ ಬಾಲಪ್ರತಿಭೆ ಸಾಕ್ಷ್ಯಾ ಸಂತೋಷ್‌ ಅವರು ರಾಂಚಿಯಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌ ಯೂತ್‌ ಬಾಲಕಿಯರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದರು.

10 ವರ್ಷದ ಸಾಕ್ಷ್ಯಾ ಅವರು
ಸೆಮಿಫೈನಲ್‌ನಲ್ಲಿ 1–3 (13–15, 9–11, 11–2, 10–11) ರಿಂದ ಆಧ್ಯಾ ಅವರಿಗೆ ಶರಣಾಗಿ, ಕಂಚಿನ ಪದಕ ದೊಂದಿಗೆ ಅಭಿಯಾನ ಮುಗಿಸಿದರು

ADVERTISEMENT

ಕರ್ನಾಟಕದ ಆಟಗಾರ್ತಿ ಕಾರ್ಟರ್‌ ಫೈನಲ್‌ನಲ್ಲಿ 3–0ಯಿಂದ ಹರಿಯಾಣದ ಮೋಕ್ಷಾ ಅವರನ್ನು ಮಣಿಸಿದ್ದರು.

17ರಿಂದ ಟಿ.ಟಿ ಟೂರ್ನಿ

ಬೆಂಗಳೂರು: ಮಲ್ಲೇಶ್ವರದ ಕೆನರಾ ಯೂನಿಯನ್‌ನಲ್ಲಿ ಸಿ.ವಿ.ಎಲ್‌. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್‌ ಚಾಂಪಿ ಯನ್‌ಷಿಪ್‌ ಅನ್ನು ಇದೇ 17ರಿಂದ 21ರವರೆಗೆ ಹಮ್ಮಿಕೊಳ್ಳಲಾಗಿದೆ.

11, 13, 15, 17 ಹಾಗೂ 19 ವರ್ಷ
ದೊಳಗಿನವರ ಬಾಲಕರ ಮತ್ತು ಬಾಲಕಿ ಯರ ಸಿಂಗಲ್ಸ್‌ ಹಾಗೂ ಪುರುಷರ, ಮಹಿಳೆಯರ, ಎನ್‌ಎಂಎಸ್‌ ಸಿಂಗಲ್ಸ್‌ ಸ್ಪರ್ಧೆಗಳು ನಡೆಯಲಿವೆ. ನೋಂದಣಿಗೆ ಇದೇ 13 ಕೊನೆಯ ದಿನವಾಗಿದೆ. ‌ಮಾಹಿತಿಗೆ ಸಂಜಯ್
ಮೊ: 94484 85357.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.