ADVERTISEMENT

ರಾಷ್ಟ್ರೀಯ ಟಿಟಿ: ತನಿಷ್ಕಾಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 18:41 IST
Last Updated 24 ಜನವರಿ 2023, 18:41 IST
ತನಿಷ್ಕಾ
ತನಿಷ್ಕಾ   

ಬೆಂಗಳೂರು: ಕರ್ನಾಟಕದ ತನಿಷ್ಕಾ ಅವರು ಸೂರತ್‌ನಲ್ಲಿ ನಡೆದ ರಾಷ್ಟ್ರೀಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಬಾಲಕಿಯರ 11 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಫೈನಲ್‌ನಲ್ಲಿ ತನಿಷ್ಕಾ 12-10, 11-4, 11-6 ರಲ್ಲಿ ಬಂಗಾಳದ ಸಾತುರ್ಯ ಬ್ಯಾನರ್ಜಿ ಅವರನ್ನು ಮಣಿಸಿದರು.

ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ನಲ್ಲಿ 11-9, 11-7, 11-3 ರಲ್ಲಿ ಶಾರಿಕಾ ಶಾಹಿದ್‌ ವಿರುದ್ಧ ಗೆದ್ದಿದ್ದರೆ, ಕ್ವಾರ್ಟರ್‌ ಫೈನಲ್‌ನಲ್ಲಿ 11-7, 9-11, 11-3, 11-4 ರಲ್ಲಿ ಶರಣ್ಯಾ ಅವರನ್ನು ಸೋಲಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.