ADVERTISEMENT

ಅನುಚಿತ ವರ್ತನೆ: ಸಹಾಯಕ ಕೋಚ್ ವಜಾ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 4:29 IST
Last Updated 4 ಜುಲೈ 2022, 4:29 IST

ನವದೆಹಲಿ: ಭಾರತ 17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್‌ ತಂಡದ ಆಟಗಾರ್ತಿಯ ಜತೆ ‘ಅನುಚಿತ ವರ್ತನೆ’ ತೋರಿದ್ದಕ್ಕೆ, ಸಹಾಯಕ ಕೋಚ್ ಅಲೆಕ್ಸ್‌ ಅಂಬ್ರೋಸ್ ಅವರನ್ನು ವಜಾ ಮಾಡಲಾಗಿದೆ.

‘ಆಟಗಾರ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಂಬ್ರೋಸ್‌ ಅವರನ್ನು ವಜಾ ಮಾಡಲಾಗಿದೆ. ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಐಎಫ್‌ಎಫ್‌ ಆಡಳಿತ ನೋಡಿಕೊಳ್ಳಲು ಸುಪ್ರೀಂಕೋರ್ಟ್‌ ನೇಮಿಸಿರುವ ಆಡಳಿತ ಸಮಿತಿ (ಸಿಒಎ) ಸದಸ್ಯ ಎಸ್‌.ವೈ.ಖುರೇಷಿ ಹೇಳಿದ್ದಾರೆ.

17 ವರ್ಷದೊಳಗಿನ ವಿಶ್ವಕಪ್‌ ಟೂರ್ನಿಗೆ ಸಿದ್ಧತೆ ನಡೆಸುವ ಅಂಗವಾಗಿ ಭಾರತ ತಂಡ ನಾರ್ವೆ ಪ್ರವಾಸದಲ್ಲಿದ್ದು, ಅಲ್ಲಿ ಈ ಘಟನೆ ನಡೆದಿತ್ತು. ತಂಡದ ಮುಖ್ಯ ಕೋಚ್‌ ಥಾಮಸ್‌ ಡೆನೆರ್ಬಿ ಅವರು ಈ ಬಗ್ಗೆ ಎಐಎಫ್‌ಎಫ್‌ಗೆ ದೂರು ನೀಡಿದ್ದರು. ತಂಡವನ್ನು ತೊರೆದು ತಕ್ಷಣವೇ ಭಾರತಕ್ಕೆ ವಾಪಸಾಗುವಂತೆ ಅಂಬ್ರೋಸ್‌ ಅವರಿಗೆ ಸೂಚಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.