ADVERTISEMENT

ಯುರೋಪಿಯನ್ನರ ಪಾರಮ್ಯದ ಸ್ಪರ್ಧೆನಲ್ಲಿ ಈಗ ನೀರಜ್, ನನ್ನ ಮೇಲುಗೈ: ನದೀಮ್

ಬೆಳ್ಳಿ ಗೆದ್ದ ನದೀಮ್ ಹೇಳಿಕೆ

ಪಿಟಿಐ
Published 28 ಆಗಸ್ಟ್ 2023, 15:44 IST
Last Updated 28 ಆಗಸ್ಟ್ 2023, 15:44 IST
ಪಾಕಿಸ್ತಾನದ ಅರ್ಷದ್ ನದೀಮ್ (ಎಡಭಾಗದಲ್ಲಿ) ಹಾಗೂ ಭಾರತದ ನೀರಜ್ ಚೋಪ್ರಾ (ಬಲಭಾಗದಲ್ಲಿ)
ಪಾಕಿಸ್ತಾನದ ಅರ್ಷದ್ ನದೀಮ್ (ಎಡಭಾಗದಲ್ಲಿ) ಹಾಗೂ ಭಾರತದ ನೀರಜ್ ಚೋಪ್ರಾ (ಬಲಭಾಗದಲ್ಲಿ)   

ಕರಾಚಿ: ಪ್ಯಾರಿಸ್‌ನಲ್ಲಿ ಮುಂದಿನ ವರ್ಷ ನಡೆಯುವ ಒಲಿಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ಅವರಿಗೆ ಪಾಕಿಸ್ತಾನದ ಅರ್ಷದ್ ನದೀಮ್ ಅವರಿಂದ ಪ್ರಬಲ ಪೈಪೋಟಿ ಎದುರಾಗಬಹುದು. ಆದರೆ ನದೀಮ್ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಂದು ಕಾಲದಲ್ಲಿ ಯುರೋಪಿಯನ್ನರು ಪಾರಮ್ಯ ವಹಿಸಿದ್ದ ಕ್ರೀಡೆಯಲ್ಲಿ ತಾವಿಬ್ಬರು ಮೇಲುಗೈ ಸಾಧಿಸುತ್ತಿರುವುರಿಂದ ತುಂಬ ಸಂಸತವಾಗುತ್ತಿದೆ ಎಂದು ನದೀಮ್ ಹೇಳಿದ್ದಾರೆ.

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಮೊದಲ ಅಥ್ಲೀಟ್‌ ಎನಿಸಿರುವುದರಿಂದ ನದೀಮ್‌ ಈಗ ಕ್ರಿಕೆಟ್‌ ಆಕರ್ಷಣೆಯ ಪಾಕಿಸ್ತಾನದಲ್ಲಿ ಮನೆಮಾತಾಗಿದ್ದಾರೆ.

‘ನೀರಜ್ ಮತ್ತು ನನ್ನ ನಡುವೆ ಆರೋಗ್ಯಕರ ಪೈಪೋಟಿಯಿದೆ. ಪರಸ್ಪರರನ್ನು ಗೌರವಿಸುತ್ತೇವೆ. ಇದು ಪಾಕ್‌–ಭಾರತ ನಡುವಣ ನಕಾರಾತ್ಮಕ ಪೈಪೋಟಿಯಲ್ಲ’ ಎಂದರು.

ADVERTISEMENT

‘ಇತ್ತೀಚಿನ ವರ್ಷಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಚೋಪ್ರಾ ಎದುರು ವಿಶ್ವ ಕೂಟದಲ್ಲಿ ಸ್ಪರ್ಧಿಸಿ ಬೆಳ್ಳಿಯ ಪದಕ ಗೆದ್ದಿರುವುದು ತುಂಬಾ ತೃಪ್ತಿತಂದಿದೆ’ ಎಂದೂ ಹೇಳಿದರು. ‘ಸರ್ಜರಿ ನಂತರ 87.82 ಮೀ. ಎಸೆಯಲು ಸಾಧ್ಯವಾಗಿರುವುದು ಅತೀವ ಸಮಾಧಾನ ಮೂಡಿಸಿದೆ’ ಎಂದರು. ನದೀಮ್‌ಗೆ ಕಳೆದ ವರ್ಷ ಮೊಣಕೈ ಶಸ್ತ್ರಚಿಕಿತ್ಸೆಯಾಗಿತ್ತು.

ಭಾನುವಾರ ಸ್ಪರ್ಧೆಯ ನಂತರ, ಗೆಲುವಿನ ಸಂಭ್ರಮದಲ್ಲಿ ಟ್ರ್ಯಾಕ್‌ ಸುತ್ತ ಓಡುವ ಮೊದಲು ಚೋಪ್ರಾ ಅವರಿ ಪಾಕ್‌ ಸ್ಪರ್ಧಿಯನ್ನು ಆಹ್ವಾನಿಸಲು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.