ADVERTISEMENT

ಒಲಿಂಪಿಕ್ಸ್ ಪದಕ ವಿಜೇತರಿಗೆ ಬಿಸಿಸಿಐ ನಗದು ಬಹುಮಾನ: ನೀರಜ್ ಚೋಪ್ರಾಗೆ ₹1 ಕೋಟಿ

ಪಿಟಿಐ
Published 7 ಆಗಸ್ಟ್ 2021, 16:33 IST
Last Updated 7 ಆಗಸ್ಟ್ 2021, 16:33 IST
ಸಾಂದರ್ಭಿಕ ಚಿತ್ರ – ಎಎಫ್‌ಪಿ
ಸಾಂದರ್ಭಿಕ ಚಿತ್ರ – ಎಎಫ್‌ಪಿ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಪದಕ ವಿಜೇತರಾದವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಗದು ಬಹುಮಾನ ಘೋಷಿಸಿದೆ. ಅಥ್ಲೀಟ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ನೀರಜ್‌ ಚೋಪ್ರಾಗೆ ₹1 ಕೋಟಿ ಬಹುಮಾನ ಘೋಷಿಸಿದೆ.

ಬೆಳ್ಳಿ ಪದಕ ಗಳಿಸಿದ ಮೀರಾಬಾಯಿ ಚಾನು ಮತ್ತು ರವಿ ದಹಿಯಾಗೆ ತಲಾ ₹50 ಲಕ್ಷ ಘೋಷಿಸಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಕಂಚಿನ ಪದಕ ಗಳಿಸಿದ ಬಜರಂಗ್ ಪೂನಿಯಾ, ಲವ್ಲಿನಾ ಬೋರ್ಗೊಹೈನ್, ಪಿ.ವಿ.ಸಿಂಧು ಅವರಿಗೆ ತಲಾ ₹25 ಲಕ್ಷ ನೀಡುವುದಾಗಿ ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.

41 ವರ್ಷಗಳ ಬಳಿಕ ಒಲಿಂಪಿಕ್ಸ್ ಪದಕ ಗೆದ್ದ ಪುರುಷರ ಹಾಕಿ ತಂಡಕ್ಕೆ ₹1.25 ಕೋಟಿ ಬಹುಮಾನ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.