ನ್ಯೂಜಿಲೆಂಡ್ ತಂಡ (ಸಂಗ್ರಹ ಚಿತ್ರ)
ಆಕ್ಲೆಂಡ್: ನ್ಯೂ ಕೆಲೆಡೋನಿಯಾ ತಂಡವನ್ನು ಒಷಾನಿಯಾ ಕಾನ್ಫೆಡರೇಷನ್ ಫೈನಲ್ ಪಂದ್ಯದಲ್ಲಿ 3–0 ಯಿಂದ ಸೋಲಿಸಿದ ನ್ಯೂಜಿಲೆಂಡ್ ತಂಡ 2026ರ ವಿಶ್ವಕಪ್ ಫೈನಲ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿತು.
‘ಆಲ್‌ವೈಟ್ಸ್’ ಎಂದು ಕರೆಸಿಕೊಳ್ಳುವ ನ್ಯೂಜಿಲೆಂಡ್ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆದಿರುವುದು ಮೂರನೇ ಬಾರಿ. 1982ರ ಸ್ಪೇನ್ ವಿಶ್ವಕಪ್‌ನಲ್ಲಿ ಮತ್ತು 2010ರ ದಕ್ಷಿಣ ಆಫ್ರಿಕಾ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಆಡಿತ್ತು.
ಕಳೆದ ವಾರವಷ್ಟೇ, ಜಪಾನ್ ತಂಡವು ವಿಶ್ವಕಪ್‌ಗೆ ಅರ್ಹತೆ ಪಡೆದ ಮೊದಲ ತಂಡ ಎನಿಸಿತ್ತು.
ವಿಶ್ವಕಪ್ ಟೂರ್ನಿಯ ಮುಂದಿನ ವರ್ಷ (ಜೂನ್ 11ರಿಂದ ಜುಲೈ 19) ಅಮೆರಿಕ–ಕೆನಡಾ–ಮೆಕ್ಸಿಕೊ ಆತಿಥ್ಯದಲ್ಲಿ ನಡೆಯಲಿದೆ. ದಾಖಲೆಯ 48 ತಂಡಗಳು ಆಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.