ADVERTISEMENT

ರ‍್ಯಾಲಿ: ಗೌರವ್ ಗಿಲ್‌ಗೆ ಐಎನ್‌ಆರ್‌ಸಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 21:26 IST
Last Updated 22 ಡಿಸೆಂಬರ್ 2019, 21:26 IST
ಸಹಚಾಲಕ ಮೂಸಾ ಶೆರಿಫ್ (ಎಡ) ಜೊತೆ ಗೌರವ್ ಗಿಲ್ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು
ಸಹಚಾಲಕ ಮೂಸಾ ಶೆರಿಫ್ (ಎಡ) ಜೊತೆ ಗೌರವ್ ಗಿಲ್ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು   

ಕೋಟ್ಟಯಂ (ಪಿಟಿಐ): ಭಾರತದ ಅಗ್ರಮಾನ್ಯ ರೇಸ್ ಚಾಲಕ ಗೌರವ್ ಗಿಲ್ ಅವರು ಭಾನುವಾರ ಇಲ್ಲಿ ನಡೆದ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದರು. ಗೌರವ್ ಗಿಲ್ ಅವರು ಸತತ ಐದನೇ ಸಲ ಈ ಸಾಧನೆ ಮಾಡಿದ್ದಾರೆ.

ಮಹೀಂದ್ರಾ ತಂಡದಲ್ಲಿರುವ ಗೌರವ್‌ ಅವರಿಗೆ ಜೆ.ಕೆ. ಟೈರ್‌ ಸಹಪ್ರಾಯೋಜಕತ್ವ ನೀಡಿದೆ. ಗೌರವ್ ಮತ್ತು ಅವರ ಸಹಚಾಲಕ ಮೂಸಾ ಶೆರಿಫ್ ಜೋಡಿಯು ಎಸ್‌ಎಸ್‌9 ವಿಭಾಗದಲ್ಲಿ ಜಯಿಸಿತು. ಇವರಿಬ್ಬರೂ ಎಸ್‌.ಎಸ್‌. 10 ಮತ್ತು ಎಸ್‌.ಎಸ್‌. 11 ವಿಭಾಗಗಳಲ್ಲಿ ದ್ವಿತೀಯರಾದರು.

ಗಿಲ್ ಅವರ ತಂಡದಲ್ಲಿರುವ ಡೀನ್ ಮೆಸಾದರೆನಸ್ ಮತ್ತು ಸುಹೇಮ್ ಕಬೀರ್ ಅವರು ಕೂಡ ಉತ್ತಮವಾಗಿ ಚಾಲನೆ ಮಾಡಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.