ADVERTISEMENT

ಓಲ್ಟಮನ್ಸ್ ಹುದ್ದೆಗೆ ಧಕ್ಕೆ ಇಲ್ಲ

ಪಿಟಿಐ
Published 4 ಜುಲೈ 2018, 18:26 IST
Last Updated 4 ಜುಲೈ 2018, 18:26 IST
ರೋಲಂಟ್ ಓಲ್ಟಮನ್ಸ್ (ಸಂಗ್ರಹ ಚಿತ್ರ).
ರೋಲಂಟ್ ಓಲ್ಟಮನ್ಸ್ (ಸಂಗ್ರಹ ಚಿತ್ರ).   

ಕರಾಚಿ: ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ತಂಡ ಕೊನೆಯ ಸ್ಥಾನ ಗಳಿಸಿದರೂ ಪಾಕಿಸ್ತಾನದ ಕೋಚ್ ಆಗಿ ರೋಲಂಟ್ ಓಲ್ಟಮನ್ಸ್ ಮುಂದುವರಿಯಲಿದ್ದಾರೆ. ತಂಡ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಲಿಲ್ಲ.

ಆದರೂ ಕೋಚ್ ಬದಲಾವಣೆ ಮಾಡದಿರಲು ಪಾಕಿಸ್ತಾನ ಹಾಕಿ ಫೆಡರೇಷನ್‌ (ಪಿಎಚ್‌ಎಫ್‌) ನಿರ್ಧರಿಸಿದೆ. ಟೂರ್ನಿಯಲ್ಲಿ ಒಲಿಂಪಿಕ್ ಚಾಂಪಿಯನ್‌ ಅರ್ಜೆಂಟೀನಾವನ್ನು ಮಣಿಸಿದ್ದು ಬಿಟ್ಟರೆ ಉಳಿದ ಯಾವುದೇ ಪಂದ್ಯದಲ್ಲಿ ಉತ್ತಮ ಆಟವಾಡಲು ಪಾಕಿಸ್ತಾನಕ್ಕೆ ಸಾಧ್ಯವಾಗಲಿಲ್ಲ.

ಇದಕ್ಕೆ ಕೋಚ್‌ ಕಾರಣ ಎಂದು ಪಾಕಿಸ್ತಾನದ ಹಿರಿಯ ಆಟಗಾರ ಜಹೀದ್‌ ಶರೀಫ್‌ ದೂರಿದ್ದರು. ‘ಓಲ್ಟಮನ್ಸ್ ಈ ಹಿಂದೆ ಭಾರತ ತಂಡದ ಕೋಚ್ ಆಗಿದ್ದರು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ವಿರುದ್ಧದ ಪಂದ್ಯದಲ್ಲಿ ಸೋಲಲು ಅವರು ‘ತಂತ್ರ’ ರೂಪಿಸಿದ್ದರು’ ಎಂದು ಶರೀಫ್ ಆರೋಪಿಸಿದ್ದರು.

ADVERTISEMENT

ಈ ಆರೋಪಕ್ಕೆ ಸೊಪ್ಪು ಹಾಕದ ಪಿಎಚ್‌ಎಫ್‌ ಪದಾಧಿಕಾರಿಗಳು ಓಲ್ಟಮನ್ಸ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.