ADVERTISEMENT

ಅಡಿಡಾಸ್ ಶೂ ಮೇಲೆ 'ಹಿಮಾ' ಹೆಸರು

ಪಿಟಿಐ
Published 26 ಏಪ್ರಿಲ್ 2020, 21:22 IST
Last Updated 26 ಏಪ್ರಿಲ್ 2020, 21:22 IST
ಹಿಮಾ ದಾಸ್
ಹಿಮಾ ದಾಸ್   

ನವದೆಹಲಿ: ಸ್ಪ್ರಿಂಟರ್ ಹಿಮಾದಾಸ್ ಅವರಿಗಾಗಿ ವಿಶೇಷ ಶೂ ತಯಾರಿಸಲಿರುವ ಅಡಿಡಾಸ್ ಕಂಪೆನಿ ಆ ಶೂಗಳ ಮೇಲೆ ಅವರ ಹೆಸರು ಬರೆಯಲು ನಿರ್ಧರಿಸಿದೆ. ಆದರೆ ಒಂದು ಕಾಲದಲ್ಲಿ ತಾನು ಧರಿಸುತ್ತಿದ್ದ ಕಳಪೆ ದರ್ಜೆಯ ಶೂಗಳ ಮೇಲೆ ಅಡಿಡಾಸ್ ಹೆಸರನ್ನು ಬರೆಯು ತ್ತಿದ್ದೆ ಎಂದು ಹಿಮಾ ಭಾವುಕರಾಗಿ ಹೇಳಿದ್ದಾರೆ.

ಭಾರತದ ಅನುಭವಿ ಕ್ರಿಕೆಟಿಗ ಸುರೇಶ್ ರೈನಾ ಜೊತೆ ಭಾನುವಾರ ನಡೆಸಿದ ಇನ್‌ಸ್ಟಾಗ್ರಾಂ ಸಂವಾದದಲ್ಲಿ ಈ ವಿಷಯವನ್ನು ತಿಳಿಸಿರುವ ಹಿಮಾ ದಾಸ್ ತಾವು ಪಾಲ್ಗೊಂಡ ಮೊದಲ ಸ್ಪರ್ಧೆಗಾಗಿ ಧರಿಸಲು ತಂದೆ ಸ್ಪೈಕ್ಸ್ ಇರುವ ಸಾಮಾನ್ಯ ಶೂಗಳನ್ನು ಖರೀದಿಸಿಕೊಟ್ಟಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT