ADVERTISEMENT

21ರಿಂದ ಜಲ ಕ್ರೀಡಾ ಉತ್ಸವ: 400ಕ್ಕೂ ಅಧಿಕ ಮಂದಿ ಭಾಗಿ

ಪಿಟಿಐ
Published 18 ಆಗಸ್ಟ್ 2025, 14:12 IST
Last Updated 18 ಆಗಸ್ಟ್ 2025, 14:12 IST
ಮ್ಯಾಸ್ಕಟ್‌
ಮ್ಯಾಸ್ಕಟ್‌   

ಶ್ರೀನಗರ: ಇಲ್ಲಿನ ಪ್ರಸಿದ್ಧ ದಲ್‌ ಸರೋವರದಲ್ಲಿ ಇದೇ 21 ರಿಂದ 23ರವರೆಗೆ ನಡೆಯಲಿರುವ ಖೇಲೊ ಇಂಡಿಯಾ ಜಲ ಕ್ರೀಡಾ ಉತ್ಸವದಲ್ಲಿ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 400ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. 

ಚೊಚ್ಚಲ ಆವೃತ್ತಿಯ ಈ ಉತ್ಸವದಲ್ಲಿ ರೋಯಿಂಗ್, ಕಯಾಕಿಂಗ್ ಮತ್ತು ಕೆನೋಯಿಂಗ್ ಎಂಬ ಮೂರು ಸ್ಪರ್ಧೆಗಳು ನಡೆಯಲಿವೆ. ಜಮ್ಮು ಮತ್ತು ಕಾಶ್ಮೀರ ಕ್ರೀಡಾ ಕೌನ್ಸಿಲ್‌, ಈ ಉತ್ಸವವನ್ನು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಭಾರತ ಕ್ರೀಡಾ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸುತ್ತಿದೆ. 

ದಶಕಗಳಿಂದ ದಲ್ ಸರೋವರವು ಪ್ರವಾಸೋದ್ಯಮದ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇದೀಗ ಚೊಚ್ಚಲ ಜಲ ಕ್ರೀಡಾ ಉತ್ಸವದ ಆತಿಥ್ಯದೊಂದಿಗೆ ಸ್ಪರ್ಧಾತ್ಮಕ ಕ್ರೀಡಾ ಚಟುವಟಿಕೆಗಳ ತಾಣವಾಗಿಯೂ ಉತ್ತೇಜನ ಪಡೆಯಲಿದೆ. 

ADVERTISEMENT

‘ಇದು ಕೇವಲ ಒಂದು ಕಾರ್ಯಕ್ರಮವಲ್ಲ. ದೇಶದಲ್ಲಿ ಜಲ ಕ್ರೀಡೆಗಳಿಗೆ ಹೊಸ ಯುಗದ ಆರಂಭವಾಗಲಿದೆ. ಈ ಕ್ರೀಡೆಗಳಿಗೆ ಅರ್ಹವಾದ ಮನ್ನಣೆ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ’ ಎಂದು ಒಲಿಂಪಿಯನ್‌ ತೀರ್ಪುಗಾರ ಬಿಲ್ಕಿಸ್ ಮಿರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.