ನವದೆಹಲಿ: ಭಾರತದ ಗ್ರ್ಯಾಂಡ್‌ಮಾಸ್ಟರ್ ಪಿ.ಇನಿಯನ್ ಅವರು ಫ್ರಾನ್ಸ್‌ನ ಎಕ್ಸ್ ಎನ್ ಪ್ರಾವಿನ್ಸ್ ನಗರದಲ್ಲಿ ಸೋಮವಾರ ಮುಕ್ತಾಯಗೊಂಡ ಡೋಲ್ ಓಪನ್ ಇಂಟರ್‌ನ್ಯಾಷನಲ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ತಮಿಳುನಾಡಿನ ಈರೋಡ್‌ನ ಆಟಗಾರ ಮತ್ತು ಪೋಲೆಂಡ್‌ನ ಯಾನ್ ಮಲೆಕ್ ತಲಾ 7.5 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನದಲ್ಲಿದ್ದರು. ಆದರೆ ಟೈಬ್ರೇಕರ್‌ನಲ್ಲಿ ಇನಿಯನ್‌ಗೆ ಪ್ರಶಸ್ತಿ ಒಲಿಯಿತು. ಅವರು ಟೂರ್ನಿಯಲ್ಲಿ ಗೆಲುವು ಸೇರಿದಂತೆ ಅಜೇಯರಾಗುಳಿದರು. ಉಜ್ಬೇಕಿಸ್ತಾನ, ಟರ್ಕಿ, ಪೋಲೆಂಡ್, ಫ್ರಾನ್ಸ್‌ನ ಐಎಂ ಆಟಗಾರರನ್ನು ಮಣಿಸಿದರು. ಅವರು ಕೊನೆಯ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಗೆಲುವು ಪಡೆದರು.
ಈ ಟೂರ್ನಿಯಲ್ಲಿ 39 ಜಿಎಂಗಳು ಒಳಗೊಂಡಂತೆ 43 ದೇಶಗಳ 276 ಆಟಗಾರರು ಭಾಗವಹಿಸಿದ್ದರು. ಟೈಬ್ರೇಕ್‌ನ ಮೊದಲ ಪಂದ್ಯ ಡ್ರಾ ಆಯಿತು. ಎರಡನೇ ಪಂದ್ಯದಲ್ಲಿ ಇನಿಯನ್ ಕಪ್ಪು ಕಾಯಿಗಳಲ್ಲಿ ಆಡಿ ಜಯಗಳಿಸಿದರು.
ಕೊನೆಯ ಒಂದು ಸುತ್ತು ಉಳಿದಿದ್ದಾಗ ಅಗ್ರಸ್ಥಾನದಲ್ಲಿದ್ದ ಗ್ರ್ಯಾಂಡ್‌ಮಾಸ್ಟರ್ ಪಾವೆಲ್ ಎಲ್ಯನೋವ್ (7 ಪಾಯಿಂಟ್) ಅಂತಿಮವಾಗಿ ಮೂರನೇ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.