ADVERTISEMENT

Padma Awards 2026: ರೋಹಿತ್ ಶರ್ಮಾ, ಹರ್ಮನ್‌ಪ್ರೀತ್‌ಗೆ ಪದ್ಮ ಶ್ರೀ ಗೌರವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜನವರಿ 2026, 14:07 IST
Last Updated 25 ಜನವರಿ 2026, 14:07 IST
   

ನವದೆಹಲಿ: ಭಾರತ ತಾರಾ ಕ್ರಿಕೆಟ್‌ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಹರ್ಮನ್‌ಪ್ರೀತ್‌ ಕೌರ್‌ ಅವರಿಗೆ ಪದ್ಮ ಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಗಣರಾಜೋತ್ಸವದ ಮುನ್ನದಿನವಾದ ಭಾನುವಾರ ಕೇಂದ್ರ ಗೃಹ ಸಚಿವಾಲಯವು ಈ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

5 ಸಾಧಕರು ‘ಪದ್ಮವಿಭೂಷಣ’, 13 ಸಾಧಕರು ‘ಪದ್ಮಭೂಷಣ’ ಮತ್ತು 113 ಮಂದಿ ತಮ್ಮ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗಾಗಿ ‘ಪದ್ಮಶ್ರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ADVERTISEMENT

ಭಾರತ ಪುರುಷರ ಕ್ರಿಕೆಟ್‌ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಮಹಿಳೆಯರ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಮಾಜಿ ಟೆನಿಸ್‌ ಆಟಗಾರ ವಿಜಯ್ ಅಮೃತ್‌ರಾಜ್ ಅವರಿಗೆ ಪದ್ಮ ಭೂಷಣ ನೀಡಲಾಗಿದೆ.

ಕ್ರೀಡಾಪಟುಗಳಾದ ಬಲದೇವ್ ಸಿಂಗ್ , ಭಗವಾನ್‌ದಾಸ್ ರಾಯ್ಕ್ವಾರ್, ಕೆ ಪಜನಿವೆಲ್, ಪ್ರವೀಣ್ ಕುಮಾರ್, ಸವಿತಾ ಪುನಿಯಾ, ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ ಅವರಿಗೆ ಪದ್ಮ ಶ್ರೀ ಗೌರವ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.