ADVERTISEMENT

ಚಿನ್ನದ ಪದಕ ಗೆದ್ದ ಅರ್ಷದ್‌ಗೆ ಮಾವನಿಂದ ಎಮ್ಮೆ ಉಡುಗೊರೆ

ಪಿಟಿಐ
Published 12 ಆಗಸ್ಟ್ 2024, 0:07 IST
Last Updated 12 ಆಗಸ್ಟ್ 2024, 0:07 IST
<div class="paragraphs"><p>ಪ್ಯಾರಿಸ್‌ನಿಂದ ತಮ್ಮ ತವರೂರು ಮಿಯಾ ಚಾನ್ನು ಪಟ್ಟಣಕ್ಕೆ ಮರಳಿದ ಒಲಿಂಪಿಕ್ಸ್‌ ಜಾವೆಲಿನ್ ಚಾಂಪಿಯನ್ ಅರ್ಷದ್ ನದೀಂ ಅವರು ತಮ್ಮ ತಾಯಿ ರಝಿಯಾ ಪರವೀನ್ ಅವರನ್ನು ಆಲಂಗಿಸಿಕೊಂಡರು&nbsp; –ಎಎಫ್‌ಪಿ ಚಿತ್ರ </p></div>

ಪ್ಯಾರಿಸ್‌ನಿಂದ ತಮ್ಮ ತವರೂರು ಮಿಯಾ ಚಾನ್ನು ಪಟ್ಟಣಕ್ಕೆ ಮರಳಿದ ಒಲಿಂಪಿಕ್ಸ್‌ ಜಾವೆಲಿನ್ ಚಾಂಪಿಯನ್ ಅರ್ಷದ್ ನದೀಂ ಅವರು ತಮ್ಮ ತಾಯಿ ರಝಿಯಾ ಪರವೀನ್ ಅವರನ್ನು ಆಲಂಗಿಸಿಕೊಂಡರು  –ಎಎಫ್‌ಪಿ ಚಿತ್ರ

   

ಕರಾಚಿ: ಪ್ಯಾರಿಸ್ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಜಯಿಸಿದ ನದೀಂ ಅರ್ಷದ್ ಅವರಿಗೆ ಪಾಕಿಸ್ತಾನದಲ್ಲಿ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. 

ನದೀಂ ಅವರಿಗೆ ತಮ್ಮ ಮಾವನಿಂದ ವಿಶೇಷ ಉಡುಗೊರೆಯೂ ಲಭಿಸಿದೆ. ತಮ್ಮ ಪ್ರೀತಿಯ ಅಳಿಯನಿಗೆ ಅವರು ಎಮ್ಮೆಯನ್ನು ಕಾಣಿಕೆ ನೀಡಿದ್ದಾರೆ. 

ADVERTISEMENT

‘ನಮ್ಮ ಸಂಪ್ರದಾಯದಲ್ಲಿ ಎಮ್ಮೆ ಕಾಣಿಕೆ ನೀಡುವುದು ಅಮೂಲ್ಯವಾದುದು. ದೊಡ್ಡ ಗೌರವವೂ ಹೌದು’ ಎಂದು ನದೀಂ ಅವರ ಮಾವ ಮೊಹಮ್ಮದ್ ನವಾಜ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ.

‘ನದೀಂ ತಮ್ಮ ಬೇರುಗಳನ್ನು ಎಂದಿಗೂ ಮರೆತಿಲ್ಲ. ದೊಡ್ಡ ಸಾಧನೆ ಮಾಡಿದರೂ ತಮ್ಮ ಗ್ರಾಮದಲ್ಲಿರುವ ಮನೆಯಲ್ಲಿ ಪಾಲಕರು ಮತ್ತು ಸಹೋದರರೊಂದಿಗೆ ವಾಸಿಸುತ್ತಾರೆ’ ಎಂದು ನವಾಜ್ ಹೇಳಿದರು. 

‘ನನಗೆ ನಾಲ್ವರು ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳಿದ್ದಾರೆ. ಕಿರಿಯ ಪುತ್ರಿ ಅಯೇಷಾ ಅವರನ್ನು ನದೀಂ ಮದುವೆಯಾಗಿದ್ದಾರೆ’ ಎಂದು ನವಾಜ್ ತಿಳಿಸಿದರು.  ‘ದಂಪತಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.