ಕೊಲಂಬೊ: ಭಾರತ ತಂಡವು ಎಸಿಬಿಎಸ್ ಏಷ್ಯನ್ ಸ್ನೂಕರ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು.
ಗುರುವಾರ ಆರಂಭವಾದ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವು ಸಿ ಗುಂಪಿನಲ್ಲಿ 3–0ಯಿಂದ ಬಾಂಗ್ಲಾದೇಶದ ವಿರುದ್ಧ ಜಯಿಸಿತು. ಪಂಕಜ್ ಅದ್ವಾನಿ, ಆದಿತ್ಯ ಮೆಹ್ತಾ ಮತ್ತು ಬ್ರಿಜೇಶ್ ಧಮಾನಿ ಅವರಿದ್ದ ತಂಡವು ಪಾರಮ್ಯ ಮೆರೆಯಿತು. ಇದೇ ತಂಡವು ಎರಡು ವರ್ಷಗಳ ಹಿಂದೆ ಚಿನ್ನದ ಪದಕ ಜಯಿಸಿತ್ತು.
ಮೊದಲ ಸಿಂಗಲ್ಸ್‌ನಲ್ಲಿ ಪಂಕಜ್ ಅವರು 73–31ರಿಂದ ಬಾಂಗ್ಲಾದ ಮುಂತಾಸಿರ್ ಸಿದ್ದೀಕಿ ಅವರನ್ನು ಮಣಿಸಿದರು. ಎರಡನೇ ಫ್ರೇಮ್‌ನಲ್ಲಿ ದಮಾನಿ ಅವರು ಝಿಯಾವುರ್ ರೆಹಮಾನ್ ಆಝಾದ್ ವಿರುದ್ಧ ಮೇಲುಗೈ ಸಾಧಿಸಿದರು.
ಡಬಲ್ಸ್‌ನಲ್ಲಿ ಪಂಕಜ್ ಮತ್ತು ಆದಿತ್ಯ ಮೆಹ್ತಾ ಜೊತೆಗೂಡಿ ಬಾಂಗ್ಲಾದ ಸಿದ್ದೀಕಿ ಮತ್ತು ರೆಹಮಾನ್ ಜೋಡಿಯನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.