ಮುಂಬೈ: ನಿಧಾನಗತಿಯ ಆರಂಭದ ನಂತರ ಲಯ ಕಂಡುಕೊಂಡ ಅನುಭವಿ ಪಂಕಜ್ ಅಡ್ವಾಣಿ ಅವರು ಧ್ರುವ್ ಸಿತ್ವಾಲಾ ಅವರನ್ನು 5–2 ರಿಂದ ಸೋಲಿಸಿ ಸಿಸಿಐ ಬಿಲಿಯರ್ಡ್ಸ್ ಕ್ಲಾಸಿಕ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಈ ಪ್ರಶಸ್ತಿಯನ್ನು ಅವರು ಸತತ ಮೂರನೇ ಬಾರಿ ಗೆದ್ದುಕೊಂಡಂತೆ ಆಗಿದೆ.
ಭಾನುವಾರ ತಡರಾತ್ರಿ ನಡೆದ ಫೈನಲ್‌ನ ಮೊದಲ ಮೂರು ಫ್ರೇಮ್‌ಗಳಲ್ಲಿ ಪಂಕಜ್ ತಮ್ಮ ಎಂದಿನ ರೀತಿಯ ಆಟ ಕಂಡುಕೊಳ್ಳಲು ಪರದಾಡಿದರು. ಆದರೆ ನಂತರ ಹೊಂದಿಕೊಂಡು ಮೇಲುಗೈ ಸಾಧಿಸಿದರು.
ಪಂಕಜ್ ಅಂತಿಮವಾಗಿ ಫೈನಲ್ ಪಂದ್ಯವನ್ನು 10–150 (69,51), 150 (82)–148 (95), 81–150 (85), 150 (76, 48)–96 (46, 42), 150 (145)–136 (136), 150 (84)–147 (63, 35), 150 (69, 42)– 137 (48, 36) ರಲ್ಲಿ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.