ADVERTISEMENT

ಲಿಬೆರ್‌ವಿನ್‌ ಚಾಂಪಿಯನ್ಸ್‌ ಕಪ್‌ ಸ್ಕ್ವಾಷ್‌ ಟೂರ್ನಿ: ಪಂಕಜ್ ಅದ್ವಾನಿಗೆ ಕಿರೀಟ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 14:35 IST
Last Updated 19 ಫೆಬ್ರುವರಿ 2026, 14:35 IST
ಪಂಕಜ್ ಅದ್ವಾನಿ
ಪಂಕಜ್ ಅದ್ವಾನಿ   

ಬೆಂಗಳೂರು: ದಿಗ್ಗಜ ಆಟಗಾರ ಪಂಕಜ್ ಅದ್ವಾನಿ ಅವರು ಚೊಚ್ಚಲ ಆವೃತ್ತಿಯ ಲಿಬೆರ್‌ವಿನ್‌ ಚಾಂಪಿಯನ್ಸ್‌ ಕಪ್‌ ಸ್ಕ್ವಾಷ್‌ ಟೂರ್ನಿಯ ಕಿರೀಟ ಗೆದ್ದುಕೊಂಡರು. ಅವರು, ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆಯಲ್ಲಿ ಬುಧವಾರ ನಡೆದ ಫೈನಲ್‌ನಲ್ಲಿ 6–3ರಿಂದ ಕಮಲ್‌ ಚಾವ್ಲಾ ಅವರನ್ನು ಮಣಿಸಿದರು.

ಇದಕ್ಕೆ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಅದ್ವಾನಿ ಅವರು 1–4ರ ಹಿನ್ನಡೆಯಿಂದ ಚೇತರಿಸಿಕೊಂಡು 5–4ರಿಂದ ಲಕ್ಷ್ಮಣ್‌ ರಾವತ್‌ ವಿರುದ್ಧ ಅಮೋಘ ಜಯ ಸಾಧಿಸಿದರು. ಈ ಪಂದ್ಯದಷ್ಟೇ ರೋಚಕವಾಗಿದ್ದ ಇನ್ನೊಂದು ಸೆಮಿಫೈನಲ್‌ನಲ್ಲಿ ಕಮಲ್‌ ಅವರು 5–4ರಿಂದ ಸೌರವ್‌ ಕೊಠಾರಿ ಅವರನ್ನು ಮಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT