ADVERTISEMENT

ಪಿವಿಎಲ್‌: ಬೆಂಗಳೂರು ಟಾಪಿಡೋಸ್‌ಗೆ ಪಂಕಜ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 15:32 IST
Last Updated 7 ಜನವರಿ 2022, 15:32 IST
ಪಂಕಜ್ ಶರ್ಮಾ
ಪಂಕಜ್ ಶರ್ಮಾ   

ಬೆಂಗಳೂರು: ಫೆಬ್ರುವರಿ 15ರಿಂದಕೊಚ್ಚಿಯಲ್ಲಿ ನಡೆಯಲಿರುವ ಪ್ರೈಮ್ ವಾಲಿಬಾಲ್ ಲೀಗ್‌ ಟೂರ್ನಿಯಲ್ಲಿ ಪಂಕಜ್‌ ಶರ್ಮಾ ಅವರು ಬೆಂಗಳೂರು ಟಾಪಿಡೋಸ್ ತಂಡದ ಪರ ಆಡಲಿದ್ದಾರೆ.

ಹಿಮಾಚಲ ಪ್ರದೇಶದ ರೈತ ಕುಟುಂಬದಲ್ಲಿ ಜನಿಸಿರುವ ಪಂಕಜ್‌, ಭಾರತದ ಸೇನೆಯಲ್ಲಿ ಹವಿಲ್ದಾರ್ ಆಗಿದ್ದಾರೆ. 2018ರ ಏಷ್ಯನ್ ಗೇಮ್ಸ್‌ನಲ್ಲಿ ಅವರು ರಾಷ್ಟ್ರೀಯ ತಂಡದ ಪರ ಕಣಕ್ಕಿಳಿದಿದ್ದರು.

ಪಂಕಜ್‌ ಶರ್ಮಾ ಅವರು ಸದ್ಯ ಸಿಕಂದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.