ADVERTISEMENT

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಕಂಗನಾ ರನೌತ್ ರಾಯಭಾರಿ

ಪಿಟಿಐ
Published 18 ಜೂನ್ 2025, 6:34 IST
Last Updated 18 ಜೂನ್ 2025, 6:34 IST
<div class="paragraphs"><p>ಕಂಗನಾ ರನೌತ್</p></div>

ಕಂಗನಾ ರನೌತ್

   

ನವದೆಹಲಿ: ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಆಯೋಜನೆಗೊಂಡಿದ್ದು, ಇದಕ್ಕೆ ನಟಿ ಹಾಗೂ ಸಂಸದೆ ಕಂಗನಾ ರನೌತ್ ಅವರು ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

‘ಫ್ಯಾಷನ್‌’ ಹಾಗೂ ‘ಕ್ವೀನ್‌’ನಂತ ಚಿತ್ರಗಳಲ್ಲಿ ನಟಿಸಿರುವ ಕಂಗನಾ, ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸತ್‌ ಪ್ರವೇಶಿಸಿದರು. 

ADVERTISEMENT

‘ಭಾರತದ ಪ್ಯಾರಾ ಅಥ್ಲೀಟ್‌ಗಳು ಛಲ ಹಾಗೂ ಆತ್ಮವಿಶ್ವಾಸದಿಂದ ಪ್ರತಿದಿನವೂ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಇವರನ್ನು ಬೆಂಬಲಿಸುವ ಹಾಗೂ ಅವರ ಅದ್ಭುತ ಸಾಧನೆಯ ಕುರಿತು ಜಾಗೃತಿ ಮೂಡಿಸುವ ಗೌರವ ನನಗೆ ಲಭಿಸಿದ್ದು ಸಂತೋಷ ತಂದಿದೆ. ಪ್ಯಾರಾ ಕ್ರೀಡೆಯು ಕೇವಲ ಒಂದು ಸ್ಪರ್ಧೆಯಲ್ಲ, ಇದು ಧೈರ್ಯದ ಸಂಕೇತ. ನಮ್ಮ ಚಾಂಪಿಯನ್‌ಗಳ ಬೆನ್ನಿಗೆ ನಿಲ್ಲುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ’ ಎಂದಿದ್ದಾರೆ.

ಪಿಸಿಐ ಅಧ್ಯಕ್ಷರೂ ಆಗಿರುವ ಬಿಜೆಪಿ ಮುಖಂಡ ದೇವೇಂದ್ರ ಝಝಾರಿಯಾ ಪ್ರತಿಕ್ರಿಯಿಸಿ, ‘ಕಂಗನಾ ಅವರ ವೃತ್ತಿಬದ್ಧತೆ, ಪ್ರಭಾವ ಮತ್ತು ಭಾರತದ ಅಥ್ಲೀಟ್‌ಗಳ ಕುರಿತ ಅವರ ಬದ್ಧತೆಯನ್ನು ಪ್ರದರ್ಶಿಸಲು ಕಂಗನಾ ಪರಿಪೂರ್ಣ ರಾಯಭಾರಿಯಾಗಿದ್ದಾರೆ’ ಎಂದಿದ್ದಾರೆ. ದೇವೇಂದ್ರ ಅವರು ಜಾವಲಿನ್ ಥ್ರೋನಲ್ಲಿ ಪ್ಯಾರಾಲಿಂಪಿಕ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿದ್ದಾರೆ.

2025ರ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ದೆಹಲಿಯಲ್ಲಿ ಆಯೋಜನೆಗೊಂಡಿದೆ ಸೆ. 26ರಿಂದ ಅ. 5ರವರೆಗೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಸುಮಾರು ನೂರು ದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.