
ಚಿನ್ನದ ಪದಕ ಗೆದ್ದ ಭಾರತದ ವಿನಯ್ (ಮಧ್ಯ), ಬೆಳ್ಳಿ ಗೆದ್ದ ಪೋಲೆಂಡ್‌ನ ಮಿಕೊಲಾಜ್ ಕೊಸುಬಿನ್‌ಸ್ಕಿ (ಎಡ) ಹಾಗೂ ಕಂಚಿನ ಪದಕ ಜಯಿಸಿದ ಈಕ್ವಡಾರ್‌ನ ಸೆಬಾಸ್ಟಿಯನ್ ಎಫ್.
ಎಕ್ಸ್’ ಚಿತ್ರ
ಕೈರೊ: ಭಾರತದ ವಿನಯ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಚಿನ್ನದ ಪದಕ ಗೆದ್ದುಕೊಂಡರು.
ಜೂನಿಯರ್ ಪುರುಷರ 72 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದ ಅವರು, ಎರಡನೇ ಯತ್ನದಲ್ಲಿ 142 ಕೆ.ಜಿ. ಭಾರ ಎತ್ತುವುದರೊಂದಿಗೆ ಸ್ವರ್ಣಕ್ಕೆ ಕೊರಳೊಡ್ಡಿದರು. ಉತ್ತರಪ್ರದೇಶದ ಗೋರಖಪುರದ ವಿನಯ್, ಮೊದಲ ಯತ್ನದಲ್ಲಿ 137 ಕೆ.ಜಿ. ಭಾರ ಎತ್ತಿದ್ದರು. ಮೂರನೇ ಯತ್ನದಲ್ಲಿ 147 ಕೆ.ಜಿ. ಎತ್ತಿದರಾದರೂ, ರೆಫ್ರಿಗಳು ಅದನ್ನು ಅಸಿಂಧುಗೊಳಿಸಿದರು.
ಪೋಲೆಂಡ್‌ನ ಮಿಕೊಲಾಜ್ ಕೊಸುಬಿನ್‌ಸ್ಕಿ (141 ಕೆ.ಜಿ.) ಬೆಳ್ಳಿ ಗೆದ್ದರೆ, ಈಕ್ವೆಡಾರ್‌ನ ಸೆಬಾಸ್ಟಿಯನ್ ಎಫ್. (137 ಕೆ.ಜಿ.) ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ವಿನಯ್ ಅವರು 2024ರ ಪ್ಯಾರಾ ಪವರ್‌ಲಿಫ್ಟಿಂಗ್ ವಿಶ್ವಕಪ್‌ನಲ್ಲಿ ಜೂನಿಯರ್ ವಿಭಾಗದ 59 ಕೆ.ಜಿ. ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.