ADVERTISEMENT

ಟಾಪ್ ಯೋಜನೆಗೆ ಪ್ಯಾರಾ ಅಥ್ಲೀಟ್‌ಗಳು

ಪಿಟಿಐ
Published 30 ಜನವರಿ 2019, 20:15 IST
Last Updated 30 ಜನವರಿ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಕ್ರೀಡಾ ಇಲಾಖೆಯು ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಗೆ ಪ್ಯಾರಾ ಅಥ್ಲೀಟ್‌ಗಳನ್ನು ಸೇರ್ಪಡೆ ಮಾಡಿದೆ. ಪ್ಯಾರಾ ವಿಭಾಗದ ಅಥ್ಲೆಟಿಕ್ಸ್‌, ಶೂಟಿಂಗ್, ಈಜು ಮತ್ತು ಪವರ್‌ಲಿ ಫ್ಟಿಂಗ್‌ ಕ್ರೀಡೆಗಳ ಪಟುಗಳಿಗೆ ಅವಕಾಶ ನೀಡಲಾಗಿದೆ.

2020ರ ಟೊಕಿಯೊ ಪ್ಯಾರಾ ಲಿಂಪಿಕ್ಸ್‌ ಸಿದ್ಧತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಮೂಲಗಳು ತಿಳಿಸಿವೆ.

ಎಸ್‌ಎಐ ಪ್ರಧಾನ ನಿರ್ದೇಶಕ ನೀಲಂ ಕಪೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟಾಪ್ ಯೋಜನೆಯ ಪಟ್ಟಿಯನ್ನು ಪರಿಷ್ಕರಿಸಲಾಯಿತು. ಸಾಮಾನ್ಯ ವಿಭಾಗದ ಬ್ಯಾಡ್ಮಿಂಟನ್, ಸೈಕ್ಲಿಂಗ್ ಮತ್ತು ಪ್ಯಾರಾಸ್ಪೋರ್ಟ್‌ನಿಂದ ಒಟ್ಟು 23 ಜನರನ್ನು ಸೇರಿಸಲಾಗಿದೆ.

ADVERTISEMENT

ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಏಷ್ಯಾ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಶರದ್‌ ಕುಮಾರ್ (ಹೈಜಂಪ್ ಟಿ63 42,63), ವರುಣ್ ಭಾಟಿ (ಹೈಜಂಪ್ ಟಿ63 42,63). ಸಂದೀಪ್ ಚೌಧರಿ, ಸುಮಿತ್ (ಜಾವೆಲಿನ್ ಥ್ರೋ, ಎಫ್‌ 64, 42–44, 61–44). ಸುಂದರ್‌ ಸಿಂಗ್ ಗುರ್ಜರ್ (ಜಾವೆಲಿನ್ ಥ್ರೋ ಎಫ್‌46, 45–46), ರಿಂಕು (ಜಾವೆಲಿನ್ ಎಫ್‌ 46, 45–46), ಅಮಿತ್ ಸರೋಹ (ಪುರುಷರ ಕ್ಲಬ್ ಥ್ರೋ ಎಫ್‌51), ವೀರೇಂದರ್ (ಶಾಟ್‌ಪಟ್, ಎಫ್‌ 57, 56–57), ಜಯಂತಿ ಬೆಹೆರಾ (ಮಹಿಳೆಯರ 400 ಮೀ, ಟಿ 47, 45–47) ಅವರು ಈ ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ. ಶೂಟಿಂಗ್‌ನಲ್ಲಿ ಮನೀಷ್ ನರ್ವಾಲ್, ಸಿಂಗರಾಜ್, ದೀಪೆಂದರ್, ಅವನಿ ಲೆಖರಾ, ರುಬಿನಾ ಫ್ರಾನ್ಸಿಸ್, ಪೂಜಾ ಅಗರವಾಲ್, ಸೋನಿಯಾ ಶರ್ಮಾ ಅವರಿದ್ದಾರೆ. ಪ್ಯಾರಾ ಈಜಿನಲ್ಲಿ ಎಂಟು ಮತ್ತು ಪವರ್‌ಲಿಫ್ಟಿಂಗ್‌ನಲ್ಲಿ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕದ ಈಜು ಪಟು ನಿರಂಜನ್ ಮುಕುಂದನ್, ನಾಗಪ್ಪ ಮಳಗಿ, ಸುಯಶ್ ನಾರಾಯಣ ಜಾಧವ್, ದೇವಾಂಶಿ ಸತಿಜಾ, ಕಾಂಚನ ಮಾಲಾ ಪಾಂಡೆ, ಶರತ್ ಗಾಯಕವಾಡ, ಸ್ವಪ್ನಿಲ್ ಪಾಟಿಲ್, ಚೇತನ್ ಗಿರಿಧರ್ ರಾವುತ್ ಅವರು ಸೇರ್ಪಡೆಯಾಗಿದ್ದಾರೆ.

ಸೈಕ್ಲಿಸ್ಟ್‌ಗಳಿಗೆ ಅವಕಾಶ: ಈಚೆಗೆ ನಡೆದ ಜೂನಿಯರ್ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್‌ನಲ್ಲಿ 10 ಪದಕಗಳನ್ನು ಗೆದ್ದಿ ತಂಡದ ಸೈಕ್ಲಿಸ್ಟ್‌ಗಳಿಗೆ ಯೋಜನೆ ಲಭಿಸಲಿದೆ. ಎಸೋ, ರೊನಾಲ್ಡೊ, ಜೇಮ್ಸ್‌ ಮತ್ತು ರೋಜಿತ್ ಅವರನ್ನು ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.