ADVERTISEMENT

Paralympics: 10 ಮೀ ಏರ್‌ ರೈಫಲ್‌ನಲ್ಲಿ ಅವನಿ ಲೇಖರಾಗೆ ಚಿನ್ನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2021, 4:12 IST
Last Updated 30 ಆಗಸ್ಟ್ 2021, 4:12 IST
ಅವನಿ ಲೇಖರಾ (ರಾಯಿಟರ್ಸ್ ಚಿತ್ರ)
ಅವನಿ ಲೇಖರಾ (ರಾಯಿಟರ್ಸ್ ಚಿತ್ರ)   

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ 10 ಮೀಟರ್ ಏರ್‌ ರೈಫಲ್‌ ಸ್ಟ್ಯಾಂಡಿಂಗ್ ಎಸ್‌ಎಚ್‌1 ವಿಭಾಗದಲ್ಲಿ ಭಾರತದ ಅವನಿ ಲೇಖರಾ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಈ ಮೂಲಕ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ದೊರೆತಿದೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪರ ಚಿನ್ನ ಗೆದ್ದ ಮೊದಲ ಮಹಿಳೆ ಎಂಬ ಖ್ಯಾತಿಗೆ ಅವನಿ ಲೇಖರಾ ಪಾತ್ರರಾಗಿದ್ದಾರೆ.ಅಲ್ಲದೆ, ಪ್ಯಾರಾಲಿಂಪಿಕ್ಸ್‌ನಲ್ಲಿ ಈವರೆಗೆ ಭಾರತಕ್ಕೆ ಚಿನ್ನ ತಂದುಕೊಟ್ಟವರಲ್ಲಿ ನಾಲ್ಕನೇಯವರಾಗಿದ್ದಾರೆ. ಈ ಹಿಂದೆ ಈಜುಗಾರ ಮುರಲೀಕಾಂತ್ ಪೇಟ್ಕರ್ (1972), ಜಾವೆಲಿನ್ ಥ್ರೋವರ್ ದೇವೇಂದ್ರ ಝಝಾರಿಯಾ (2004 ಮತ್ತು 2016) ಹಾಗೂ ಹೈಜಂಪರ್ ತಂಗವೇಲು ಮರಿಯಪ್ಪನ್ (2016) ಭಾರತದ ಪರ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಭಾವಿನಾಬೆನ್ ಪಟೇಲ್‌ ಮತ್ತು ನಿಶಾದ್ ಕುಮಾರ್ ಭಾನುವಾರಪ್ಯಾರಾಲಿಂಪಿಕ್ಸ್‌ನಲ್ಲಿಭಾರತಕ್ಕೆ ಬೆಳ್ಳಿ ಪದಕಗಳನ್ನು ಗೆದ್ದುಕೊಟ್ಟಿದ್ದರು.

ಐತಿಹಾಸಿಕ ಸಾಧನೆ ಮಾಡಿದ ಅವನಿ ಲೇಖರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.