ADVERTISEMENT

Paris Olympics Wrestling : ಎಂಟರ ಘಟ್ಟದಲ್ಲಿ ಸೋತ ನಿಶಾ ದಹಿಯಾ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 22:09 IST
Last Updated 5 ಆಗಸ್ಟ್ 2024, 22:09 IST
<div class="paragraphs"><p>ಸೋತ ಬಳಿಕ ಕಣ್ಣೀರು ಹಾಕಿದ ನಿಶಾ ದಹಿಯಾ </p></div>

ಸೋತ ಬಳಿಕ ಕಣ್ಣೀರು ಹಾಕಿದ ನಿಶಾ ದಹಿಯಾ

   

–ಪಿಟಿಐ ಚಿತ್ರ

ಪ್ಯಾರಿಸ್‌ : ಸೆಣಸಾಟದ ವೇಳೆ ಬಲತೋಳಿಗೆ ಉಂಟಾದ ಅತೀವ ನೋವಿನಿಂದ ತತ್ತರಿಸಿದ ಭಾರತದ ನಿಶಾ ದಹಿಯಾ ಅವರು ಒಲಿಂಪಿಕ್ಸ್ ಮಹಿಳೆಯರ 68 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಉತ್ತರ ಕೊರಿಯಾದ ಪಾಕ್ ಸೊಲ್‌ ಗುಮ್ ಎದುರು 8–10 ರಿಂದ ಸೋತರು.

ADVERTISEMENT

ಸೋಮವಾರ ನಡೆದ ಈ ಪಂದ್ಯದ ನಂತರ ಹರಿಯಾಣದ ನಿಶಾ ವೇದನೆಯಿಂದ ಕಣ್ಣೀರಿಟ್ಟರು.

ಒಂದು ಹಂತದಲ್ಲಿ, 90 ಸೆಕೆಂಡುಗಳು ಉಳಿದಿರುವಾಗ ಅವರು 8–1ರಿಂದ ಮುಂದಿದ್ದರು. ಆದರೆ ಈ ವೇಳೆ ಬಲಗೈಗೆ ಆದ ತೀವ್ರ ನೋವಿನಿಂದ ಕಷ್ಟಪಟ್ಟು ಹೋರಾಟ ಮುಂದುವರಿಸಿದರು. 10 ಸೆಕೆಂಡುಗಳಿದ್ದಾಗ ಸ್ಕೋರ್‌ 8–8ರಲ್ಲಿ ಸಮನಾಗಿತ್ತು. ಆದರೆ ನಂತರದ ಅತ್ಯಲ್ಪ ಅವಧಿಯಲ್ಲಿ ಉತ್ತರ ಕೊರಿಯಾ ಸ್ಪರ್ಧಿ ಮೇಲುಗೈ ಸಾಧಿಸಿ ಗೆಲುವು ತಮ್ಮದಾಗಿಸಿಕೊಂಡರು. ಕೊನೆಕೊನೆಯಲ್ಲಿ ನಿಶಾ ಹೋರಾಟ ನೀಡುವ ಸ್ಥಿತಿಯಲ್ಲಿರಲಿಲ್ಲ.

ಉತ್ತರ ಕೊರಿಯಾದ ಸ್ಪರ್ಧಿ ಪಾಕ್‌ ಸೊಲ್‌ ಫೈನಲ್ ತಲುಪಿದರೆ, ನಿಶಾ ಅವರಿಗೆ ರೆಪೆಷಾಜ್‌ ಮೂಲಕ ಪದಕ ಗಳಿಸಲು ಇನ್ನೊಂದು ಅವಕಾಶ ದೊರೆಯಲಿದೆ. ಆದರೆ ನೋವು ತಾಳಲಾಗದೇ ಅಳುತ್ತಿದ್ದ ಅವರು ಮತ್ತೆ ಮ್ಯಾಟ್‌ಗೆ ಹಿಂತಿರುಗುವ ಬಗ್ಗೆ ಸಂದೇಹ ಮೂಡಿದೆ.

ಇದಕ್ಕೆ ಮೊದಲು ನಿಶಾ ಅವರು ಉಕ್ರೇನ್‌ನ ಸೊವಾ ರಿಝ್ಕೊ ಅವರನ್ನು 6–4 ರಿಂದ ಸೋಲಿಸಲು ಹೆಚ್ಚೇನೂ ಶ್ರಮಪಟ್ಟಿರಲಿಲ್ಲ.

ಏಷ್ಯನ್ ಚಾಂಪಿಯನ್‌ ಬೆಳ್ಳಿ ವಿಜೇತೆಯಾಗಿರುವ ನಿಶಾ, ಹೆವಿವೇಟ್‌ ವಿಭಾಗದಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.